BANTWAL
ಪೋಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಬಂಟ್ವಾಳ ಭೇಟಿ..

ಪೋಲೀಸ್ ಮಹಾನಿರ್ದೇಶಕ ರೂಪ್ ಕುಮಾರ್ ದತ್ತಾ ಗಲಭೆ ಪೀಡಿತ ಬಂಟ್ವಾಳಕ್ಕೆ ಇಂದು ಭೇಟಿ ನೀಡಿದರು. ಬಿ.ಸಿ.ರೋಡ್ ನಲ್ಲಿ ಕೊಲೆಯಾದಂತಹ ಆರ್.ಎಸ್.ಎಸ್ ಕಾರ್ಯಕರ್ತನ ಲಾಂಡ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಬೆಂಜನಪದವಿನಲ್ಲಿ ಕೊಲೆಯಾದ ಎಸ್.ಡಿ.ಪಿ.ಐ ಮುಖಂಡ ಆಶ್ರಫ್ ಹತ್ಯೆಯಾದ ಸ್ಥಳದ ಪರಿಶೀಲನೆ ನಡೆಸಿದರು. ಡಿ.ಜಿ. ಜೊತೆ ಎಡಿಜಿಪಿ ಅಲೋಕ್ ಮೋಹನ್, ಐಜಿ ಹರಿಶೇಖರನ್ ಹಾಗೂ ದ.ಕ ಎಸ್ಪಿ ಸುಧೀರ್ ರೆಡ್ಡಿ ಕೂಡಾ ಉಪಸ್ಥಿತರಿದ್ದರು.