PUTTUR
ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಶವ ಇಟ್ಟು ಪ್ರತಿಭಟನೆ
ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಶವ ಇಟ್ಟು ಪ್ರತಿಭಟನೆ
ಪುತ್ತೂರು ನವೆಂಬರ್ 17: ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿ ಪೂಜಾ ಪುತ್ತೂರಿನ ಕಬಕದಲ್ಲಿ ಸಾವನಪ್ಪಿದ್ದರು. ಸರಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಕುಟುಂಬ ಹಾಗೂ ಗ್ರಾಮಸ್ಥರಿಂದ ಪುತ್ತೂರಿನ ಮಿನಿ ವಿಧಾನಸೌಧದ ಮುಂದೆ ವಿದ್ಯಾರ್ಥಿನಿ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಸರಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಆರೋಪ ಮಾಡಿದ ಪೂಜಾ ಕುಟುಂಬದವರು ಸರಕಾರ ಹಾಗೂ ವೈದ್ಯರ ನಡುವಿನ ಗುದ್ದಾಟ ಪೂಜಾಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ಸರಕಾರವೇ ಈ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯವು ಪ್ರತಿಭಟನಾ ನಿರತ ಗ್ರಾಮಸ್ಥರಿಂದ ಕೇಳಿ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮೃತ ವಿಧ್ಯಾರ್ಥಿನಿ ಪೂಜಾ ಮನೆಯವರು ಮನವಿ ಸಲ್ಲಿಸಿದರು.
Facebook Comments
You may like
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ
ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ
ಬಿಲ್ಲವ ಸಮುದಾಯಕ್ಕೆ ಅವಹೇಳನ ಪ್ರಕರಣ: ಬಹಿರಂಗ ಕ್ಷಮೆಯಾಚಿಸಿದ ಜಗದೀಶ್ ಅಧಿಕಾರಿ ..!
ಬಹುಗ್ರಾಮ ಕುಡಿಯುವ ನೀರು ಘಟಕ ಪರಿಶೀಲನೆ ನೆಪದಲ್ಲಿ ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
You must be logged in to post a comment Login