SULLIA
ನಿದ್ದೆಯ ಮಂಪರಿನಲ್ಲಿ ಸರ್ಕಾರಿ ಬಸ್ ದುರ್ಘಟನೆ ,ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಯಾಣಿಕರು ಪಾರು
ಸುಳ್ಯ ಅಗಸ್ಟ್ 23 : ಸುಳ್ಯ, ಆಗಸ್ಟ್ 23 : ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಕಂಪೌಂಡ್ ಗೆ ಸರ್ಕಾರಿ ಬಸ್ ನುಗ್ಗಿದ ಘಟನೆ ಇಂದು ಬೆಳಗ್ಗಿನ ಜಾವಾ ಸುಳ್ಯದಲ್ಲಿ ಸಂಭವಿಸಿದೆ. ಇಲ್ಲಿನ ಅರಂಬೂರು ಎಂಬಲ್ಲಿ ಈ ಘಟನೆ ನಡೆದಿದ್ದು ಬಸ್ ನುಗ್ಗಿದ ಪರಿಣಾಮ ಸಂಶುದ್ದೀನ್ ಎಂಬವರಿಗೆ ಸೇರಿದ ಮನೆಯ ಕಂಪೌಡ್ ಕುಸಿದು ಹಾನಿ ಸಂಭವಿಸಿದೆ. ಈ ಸ್ಲೀಪರ್ ಕೋಚ್ ಬಸ್ ಮೈಸೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದು ಎನ್ನಲಾಗಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ, ನಿದ್ದೆಯ ಮಂಪರಿನಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯಗಳಾಗಿಲ್ಲ ಆದರೆ ಕೆಲವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಸುಳ್ಯ ಪೋಲಿಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Facebook Comments
You may like
ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಗಾಯ
ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲೇ ಭಿನ್ನಮತ ಸ್ಪೋಟ..ಜಿಲ್ಲಾ ಪಂಚಾಯತ್ ಸದಸ್ಯ ಸೇರಿ ನಾಲ್ವರು ಉಚ್ಚಾಟನೆ
ನೆಲ್ಯಾಡಿಯಲ್ಲಿ ಗ್ಯಾಸ್ ಮತ್ತು ಡೀಸೆಲ್ ಟ್ಯಾಂಕರ್ ಅಪಘಾತ : ತಪ್ಪಿದ ಭಾರಿ ದುರಂತ
ಬೈಕ್ ಗೆ ಡಿಕ್ಕಿ ಹೊಡೆದ ಲಾರಿ ಮಗ ಸಾವು ಅಪ್ಪ ಗಂಭೀರ
ಡಿಜಿಟಲ್ ಇಂಡಿಯಾದಲ್ಲಿ ಒಂದು ಆಧಾರ್ ಕಾರ್ಡ್ ಬರಲು ಬೇಕಾದ ಸಮಯ ಬರೋಬ್ಬರಿ 5 ವರ್ಷ…!!
You must be logged in to post a comment Login