Connect with us

DAKSHINA KANNADA

ನಾಡೋಜ ಡಾ.ಸಾರಾ ಅಬೂಬಕ್ಕರ್ ಗೆ ಲಷ್ಕರಿ ಪ್ರಶಸ್ತಿ ಗರಿ

ಪುತ್ತೂರು, ಆಗಸ್ಟ್ 30 : ಹಿರಿಯ ಸಾಹಿತಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಪುತ್ತೂರಿನ ಲೋಕ ವಿಕಾಸ ಪ್ರತಿಷ್ಠಾನ ಹಾಗೂ ಲಷ್ಕರಿ ಕೇಶವ ಭಟ್ ಟ್ರಸ್ಟ್ ನ ಲಷ್ಕರಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅದರಲ್ಲೂ ಮಹಿಳಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಸಾರಾ ಅಬೂಬಕ್ಕರ್ ಅವರನ್ನು 2017 ನೇ ಸಾಲಿನ ಲಷ್ಕರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 3 ರಂದು ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲಷ್ಕರಿ ಪ್ರಶಸ್ತಿ ಪ್ರದಾನವಾಗಲಿದೆ. ಈ ಸಂದರ್ಭದಲ್ಲಿ ಲೋಕ ವಿಕಾಸ್ ಪ್ರತಿಷ್ಠಾನದ ಅಧ್ಯಕ್ಷ ಎಸ್ ಜಿ ಕೃಷ್ಣರವರು ರಚಿಸಿದ ‘ಸಮಾನ ನಾಗರಿಕ ಸಂಹಿತೆ ಒಂದು ವಿವೇಚನೆ ‘ ಎಂಬ ಕೃತಿ ಅನಾವರಣಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆ ನೆರವು ಸೇರಿದಂತೆ ವಿದ್ಯಾಸಂಸ್ಥೆಗಳಿಗೆ ಪ್ರತಿಷ್ಠಾನದ ವತಿಯಿಂದ ಕೊಡುಗೆಗಳ ವಿತರಣೆ ಕೂಡ ನಡೆಯಲಿದೆ.

Facebook Comments

comments