Connect with us

    DAKSHINA KANNADA

    ಸೆಪ್ಟೆಂಬರ್ 1ರಂದು ತುಳುವರ ಪರ್ಬ ಪತ್ತನಾಜೆ

    ಮಂಗಳೂರು, ಆಗಸ್ಟ್ 30:  ಪತ್ತನಾಜೆಪತ್ತನಾಜೆ ತುಳುವರ ಪರ್ಬ ಎನ್ನುವ ವಿಭಿನ್ನ ತುಳು ಚಲನಚಿತ್ರ ಇದೇ ಸೆಪ್ಟೆಂಬರ್ 1 ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಶುಭ ದಿನದಂದು ಜನಿಸುವ ನಾಯಕಿಯ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಆಯಾಮಗಳು , ಯುವ ಮನಸ್ಸುಗಳ ಪ್ರೀತಿ ಪ್ರೇಮ . ಸಮಾಜದ ಅಂಕು ಡೊಂಕು ವರ್ತುಲದಲ್ಲಿ ಸಿಲುಕಿದರೂ ಚಿತ್ರದ ನಾಯಕಿ ತುಳು ಮಣ್ಣಿನ ಪ್ರಭಾವದಿಂದ ದಡ ಸೇರುವ ಒಳ್ಳೇಯ ಕಥೆ ಇರುವ ಚಿತ್ರ ಇದಾಗಿದೆ .

    ತುಳುನಾಡಿನಲ್ಲಿ ಬೇಷ ತಿಂಗಳ 10 ನೇ ದಿನ ಪತ್ತನಾಜೆ ಯಾಗಿದ್ದು ತುಳುನಾಡಿನಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಚಿತ್ರದಲ್ಲಿನ ಎಲ್ಲಾ ಸನ್ನಿವೇಶಗಳಲ್ಲೂ ನಂಟು ಬೆಸೆಯಲಾಗಿದೆ. 10 ಪ್ರಮುಖ ಕಲಾವಿದರು, 10 ಯುವ ತಾರೆಯರು ,10 ಮಂದಿ ಯಕ್ಷ ಸಾಧಕರು , 10 ಮಹನೀಯರು ಹಾಗೂ 10 ತಂತ್ರಜ್ಞರು ಈ ಚಿತ್ರಕ್ಕೆ ದುಡಿದಿರುವುದು ಪತ್ತನಾಜೆಯ ವಿಶೇಷವಾಗಿದೆ .
    ಮುಂಬೈನ ಕಲಾಜಗತ್ತು ಕ್ರಿಯೇಷನ್ಸ್ ಲಾಂಛನದಡಿ ಈ ಚಲನಚಿತ್ರ ನಿರ್ಮಾಣವಾಗಿದೆ. ಕಲಾಜಗತ್ತು ಕ್ರಿಯೇಶನ್ಸ್ ಸಂಸ್ಥಾಪಕ ಡಾ. ತೋನ್ಸೆ ವಿಜಯ ಕುಮಾರ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ .ಕ್ಯಾತ ನಟ ಶಿವಧ್ವಜ್ , ಸೂರ್ಯ ರಾವ್ ,ರಶ್ಮಿ ಶೆಟ್ಟಿ, ಪ್ರತೀಕ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ . ಚೇತನ್ ರೈ ಮಾಣಿ ,ಸುಂದರ್ ರೈ ಮಂದಾರ ,ಪ್ರವೀಣ್ ಮರ್ಕಮೆ,ಸೀತಾ ಕೋಟೆ, ರವಿ ಸುರತ್ಕಲ್ ಮೊದಲಾದರು ಚಿತ್ರದ ತಾರಾ ಬಳಗದಲ್ಲಿದ್ದಾರೆ . ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಕಂಠ ಸಿರಿಯಲ್ಲಿ ಯಕ್ಷಗಾನ ಧಾಟಿಯಲ್ಲೇ ಚಿತ್ರದ 4 ಹಾಡುಗಳು ಅದ್ಬುತವಾಗಿ ಮೂಡಿಬಂದಿವೆ.

    ವಿಡಿಯೋಗಾಗಿ ಕ್ಲಿಕ್ ಮಾಡಿ…

    Share Information
    Advertisement
    Click to comment

    You must be logged in to post a comment Login

    Leave a Reply