LATEST NEWS
ನಮಸ್ಕಾರ ಸರ್ ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ
ನಮಸ್ಕಾರ ಸರ್ ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ
ಉಡುಪಿ, ಅಕ್ಟೋಬರ್ 12 : ” ನಮಸ್ಕಾರ ಸರ್ ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ.ಬರೇ 1850 ರೂಪಾಯಿ ಪಾವತಿಸಿ” ಹೀಗೆ ಮೊಬೈಲ್ ಗೆ ಬಂದ ಮೆಸೇಜ್ ಗೆ ಮರುಳಾಗಿ ನೀವು ಹಣ ಪಾವತಿಸಿದಿರಿ ಜೋಕೆ. ಯಾಕೇ ಅಂತೀರಾ ? ಮುಂದೆ ಓದಿ ಗೊತ್ತಾಗುತ್ತೆ..!!
ಕಳೆದ ವಾರ ಉಡುಪಿಯ ಕಲ್ಯಾಣಪುರ ನಿವಾಸಿ ಹರೀಶ್ ಕುಮಾರ್ ಎಂಬವರಿಗೆ ಎಸ್. ಕೆ. ವರ್ಲ್ಡ್ ಅನ್ನೋ ಸಂಸ್ಥೆಯಿಂದ ಕರೆ ಬಂದಿದೆ. ಆ ಕಡೆಯ ವ್ಯಕ್ತಿ ನಮಸ್ಕಾರ ಸರ್ ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾ ದಲ್ಲಿ ಆಯ್ಕೆಯಾಗಿದ್ದಿರಿ. 10 ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ನಿಮಗೆ ಸಿಕ್ಕಿದೆ. ಬರೇ 1850 ರೂಪಾಯಿ ಪಾವತಿಸಿದ್ರೆ ನಿಮಗೆ ಪೋಸ್ಟ್ ಮೂಲಕ ಕಳುಹಿಸುತ್ತೇವೆ ಎಂದು ಕರೆ ಮಾಡಿದ್ದಾರೆ.ಪಾರ್ಸೆಲ್ ನಲ್ಲಿ ಬಂದ ಸಾಮಾಗ್ರಿ
ಈ ಫೋನ್ ಕಾಲಿಗೆ ಹರೀಶ್ ಕುಮಾರ್ ಸ್ಪಂದಿಸಿದ್ದಾರೆ.ಕಳಿಸಿ ಕೊಡಿ ಅಂದಿದ್ದಾರೆ. ಆದರೆ ಅದ್ಯಾವಾಗ ಪಾರ್ಸೆಲ್ ಕೈಗೆ ಬಂತೋ ಅದಾಗಲೇ ಹರೀಶ್ ಕುಮಾರ್ ಬಕ್ರಾ ಆಗಿದ್ದು ಗೊತ್ತಾಗಿತ್ತು. ಪಾರ್ಸಲ್ ಬಾಕ್ಸ್ ನಲ್ಲಿ ಮೊಬೈಲ್ ಬದಲಿಗೆ ದೇವರ ವಿಗ್ರಹ.,! ದೀಪ..! ಗಂಟಾಮಣಿ..! ಆರತಿ ತಟ್ಟೆಗಳು..!! ಕಂಡು ಒಂದು ಕ್ಷಣ ಹರೀಶ್ ಹೌ ಹಾರಿದ್ದಾರೆ.
ಈ ರೀತಿಯ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಜನರು ಮಾತ್ರ ಆಫರ್ ಗಳಿಗೆ ಮರುಳಾಗುತ್ತಲೇ ಇದ್ದಾರೆ. ಬಲಿಯಾಗುತ್ತಾಲೇ ಇದ್ದಾರೆ ಎಂದರೆ ಎಂಥಹ ವಿಪರ್ಯಾಸ.
ಈ ಪ್ರಕರಣದಲ್ಲಿ ತಕ್ಷಣ ಹರೀಶ್ ಕುಮಾರ್ ಪೋಸ್ಟ್ ಆಫೀಸ್ ಗೆ ಅರ್ಜಿವೊಂದು ಬರೆದು ತನಗಾದ ಅನ್ಯಾಯದ ಬಗ್ಗೆ ವಿವರಿಸಿ ತಾನು ನೀಡಿದ ಮೊತ್ತವನ್ನು ತಡೆಹಿಡಿಯುವಂತೆ ಕೋರಿದ್ದಾರೆ. ಆದರೆ ಯಾವಾಗ ತನಕ ಇಂತಹ ಜಾಲಗಳಿಗೆ ಬಲಿಯಾಗುವ ಬಕ್ರಗಳಿರುತ್ತಾರೋ ಅಲ್ಲಿಯ ತನಕ ವಂಚಕರು ಇದ್ದೇ ಇರುತ್ತಾರೆ.
You must be logged in to post a comment Login