BANTWAL
ತಾಕತ್ತಿದ್ದರೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿ – ರೈ ಗೆ ಶೋಭಾ ಕರಂದ್ಲಾಜೆ ಸವಾಲ್
ತಾಕತ್ತಿದ್ದರೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿ – ರೈ ಗೆ ಶೋಭಾ ಕರಂದ್ಲಾಜೆ ಸವಾಲ್
ಬಂಟ್ವಾಳ ನವೆಂಬರ್ 11: ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ನವ ಕರ್ನಾಟಕ ಪರಿವರ್ತಾ ಯಾತ್ರೆ ಬಂಟ್ವಾಳ ತಲುಪಿದೆ,
ಬಂಟ್ವಾಳದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ ವಿರುದ್ದ ಶೋಭಾ ಕರಂದ್ಲಾಜೆ ಹರಿಹಾಯ್ದರು.
ಬಂಟ್ವಾಳದಲ್ಲಿ ರಮಾನಾಥ ರೈ ಹಿಂದೂಗಳ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ರಮಾನಾಥ ರೈ ಮುಸ್ಲಿಂರ ಓಲೈಕೆ ಮಾಡುತ್ತಿದ್ದ, ಇದರಿಂದಾಗಿ ಶರತ್ ಮಡಿವಾಳರನ್ನು ಕಳೆದುಕೊಳ್ಳುವಂತಾಗಿದೆ ಎಂದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಂಧನಕ್ಕೆ ರಮಾನಾಥ ರೈ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಅವರು ಮಾಡಿರುವ ತಪ್ಪೇನು ಎಂದು ಪ್ರಶ್ನಿಸಿದರು. ನಿಮಗೆ ತಾಕತ್ತ್ ಇದ್ದರೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿ ಎಂದು ಶೋಭಾ ಕರಂದ್ಲಾಜೆ ರಮಾನಾಥ ರೈ ಅವರಿಗೆ ಸವಾಲು ಹಾಕಿದರು.
You must be logged in to post a comment Login