ಪುತ್ತೂರು,ಜುಲೈ.22 :ಹದಿನೈದು ವರ್ಷಗಳ ಹಿಂದೆ ಮೃತಪಟ್ಟ ತನ್ನದೇ ಆನೆಯ ದಂತಕ್ಕಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿ ಸುದೀರ್ಘ ನ್ಯಾಯಾಂಗ ಹೋರಾಟ ಮಾಡಿ ಗೆದ್ದಿದ್ದಾರೆ.

 ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕರುಣಾಕರ ಪೂಜಾರಿ ಎಂಬವರ ಆನೆ ಶಿವಮೊಗ್ಗದ ಭದ್ರಾವತಿ ಅರಣ್ಯ ವಿಭಾಗದಲ್ಲಿ ಮೃತಪಟ್ಟಿತ್ತು. ಬಳಿಕ ಅದರ ದಂತವನ್ನು ಸಂಗ್ರಹಿಸಿ ಎಸ್.ಕೆ. ಆನಂದ ಎಂಬವರ ಮನೆಯಲ್ಲಿ ಇರಿಸಿದ್ದರು. ಆದರೆ 2002ರಲ್ಲಿ ಅರಣ್ಯಾಧಿಕಾರಿಗಳು ಈ ದಂತ ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಸೂಕ್ತ ದಾಖಲೆ ಹೊಂದಿದ್ದರೂ ಅರಣ್ಯಾಧಿಕಾರಿಗಳು ದಂತ ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಕರುಣಾಕರ ಪೂಜಾರಿ ನ್ಯಾಯಾಲಯದ ಮೊರೆ ಹೋಗಿದ್ದರು‌. ಇದೀಗ ಸುದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ 12 ಮತ್ತು 10 ಕೇಜಿ ತೂಕದ ಎರಡು ಆನೆ ದಂತಗಳನ್ನು ಕರುಣಾಕರ ಪೂಜಾರಿ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದೆ.ಅ

Facebook Comments

comments