Connect with us

UDUPI

ಜಿ.ಪಂ. ಕ್ರಿಯಾ ಯೋಜನೆ ಹಾಗೂ ಪ್ರಗತಿ ಪರಿಶೀಲನೆ ಸಭೆ

Share Information

ಉಡುಪಿ, ಜುಲೈ 19 : ಉಡುಪಿ ಜಿಲ್ಲಾ ಪಂಚಾಯತಿನ 2017-18ನೇ ಸಾಲಿನ ಕ್ರಿಯಾ ಯೋಜನೆ ಹಾಗೂ ಪ್ರಗತಿ ಪರಿಶೀಲನೆ ಸಭೆ ಡಾ: ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪಂಚಾಯತಿನ ಅಧ್ಯಕ್ಷರಾದ ದಿನಕರ ಬಾಬು ಇವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. 

ಉಡುಪಿ ಜಿಲ್ಲೆಗೆ ಗ್ರಾಮೀಣ ಕುಡಿಯುವ ನೀರಿಗೆ ಸುಮಾರು ರೂ. 12.00 ಕೋಟಿ ಅನುದಾನ ಬಂದಿದ್ದು ಇದು ಬಹಳ ಕಡಿಮೆ ಅನುದಾನವಾಗಿರುತ್ತದೆ. ಹಿಂದಿನ ಸಾಲಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಂದುವರಿಸಲು ಇದು ಸಾಧ್ಯವಾಗುವುದರಿಂದ , ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕಷ್ಟವಾಗುವುದು. ರಾಜ್ಯ ಸರಕಾರ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಜಿಲ್ಲೆಯ ಅಭಿವೃದ್ದಿ ಕುಂಠಿತಗೊಂಡಿರುತ್ತದೆ ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು.
ಇಲಾಖಾಧಿಕಾರಿಗಳು 2017-18ನೇ ಸಾಲಿನ ಕ್ರಿಯಾ ಯೋಜನೆ, ತೆಗೆದುಕೊಳ್ಳುವ ಕಾಮಗಾರಿಗಳ ಪಟ್ಟಿ , ಪೂರ್ಣಗೊಳಿಸಿ ಕೈಬಿಡಲಾದ ಕಾಮಗಾರಿಗಳ ಪಟ್ಟಿ, ಪ್ರಾರಂಭಿಸದೆ ಇರುವ ಕಾಮಗಾರಿಗಳ ಪಟ್ಟಿ, ಇತರೆ ಸಮಸ್ಯೆಗಳಿಂದ ಕೈಬಿಡಲಾದ ಕಾಮಗಾರಿಗಳ ಪಟ್ಟಿ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನೀಡದೆ ಇದ್ದುದರಿಂದ ಅಸಮಾಧಾನಗೊಂಡ ಅಧ್ಯಕ್ಷರು ಸಭೆಯನ್ನು ಜುಲೈ 28 ಕ್ಕೆ ಮರುನಿಗದಿಗೊಳಿಸಿ, ಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಆದೇಶಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ. ಬಾಬು ಹೆಗ್ಡೆ, , ಉದಯ ಎಸ್. ಕೋಟ್ಯಾನ್, , ಶಶಿಕಾಂತ ಪಡುಬಿದ್ರಿ, ಜಿ.ಪಂ. ನ ಮುಖ್ಯ ಯೋಜನಾಧಿಕಾರಿ ಎ. ಶ್ರೀನಿವಾಸ ರಾವ್, ಕಾರ್ಯನಿರ್ವಾಹಕ ಇಂಜಿನಿಯರು ಎ ರಾಜ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ಸಭೆಯಲ್ಲಿ ಉಪಸ್ಥಿತರಿದ್ದರು


Share Information
Advertisement
Click to comment

You must be logged in to post a comment Login

Leave a Reply