ಪುತ್ತೂರು, ಆಗಸ್ಟ್ 15 : ಚೈನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುವ ಹಾಗೂ ಜಾಗೃತಿ ಜಾಥಾ ಪುತ್ತೂರನಲ್ಲಿ ನಡೆಯಿತು. ಭಾರತಕ್ಕೆ ನಿರಂತರ ಕಿರುಕುಳ ನೀಡುತ್ತಿರುವ ನೆರೆಯ ರಾಷ್ಟ್ರ ಚೀನಾಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ದೆಶಾದ್ಯಂದ ಜನಜಾಗೃತಿ ಕಾರ್ಯಕ್ರಮಗಳು  ಆರಂಭಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು  ಆರಂಭಗೊಂಡಿವೆ. ಚೈನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುವ ಹಾಗೂ ಜಾಗೃತಿ ಜಾಥಾ ಪುತ್ತೂರನಲ್ಲಿ ನಡೆಯಿತು. ಪುತ್ತೂರಿನ ನರೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಪುತ್ತೂರು ಪೇಟೆಯಾದ್ಯಂತ ಸಂಚರಿಸಿ ಚೈನಾ ಭಾರತದ ಮೇಲೆ ನಡೆಸುತ್ತಿರುವ ಅಕ್ರಮ ಖಂಡಿಸಿ  ಹಾಗೂ ಚೈನಾ ದೇಶಕ್ಕೆ ಬುದ್ಧಿ ಕಲಿಸಲು ಭಾರತೀಯರು ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಮಾಡಿದರು. ಭಾರತದ ಭೂಭಾಗದ ಮೇಲೆ ಸತತ ಅತಿಕ್ರಮಣ ಹಾಗೂ ಕಿರುಕುಳ ನೀಡುತ್ತಿರುವ ಚೈನ ದೇಶ ಸರಿಯಾದ ಪಾಠ ಕಲಿಯಬೇಕಾದರೆ ಚೈನದಲ್ಲಿ ತಯಾರಾಗುತ್ತಿರುವ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ವಿದ್ಯಾರ್ಥಿಗಳು ಜನರಿಗೆ ಮನವರಿಕೆ ಮಾಡಿದರು.