Connect with us

    DAKSHINA KANNADA

    ಚುನಾವಣಾ ಕಣದಲ್ಲಿ ಖಾಕಿ ದರ್ಬಾರ್, ಮದನ್ ಜೊತೆಗಿರಲು ಯುವಕರ ಪಡೆ ನಿರ್ಧಾರ್

    ಚುನಾವಣಾ ಕಣದಲ್ಲಿ ಖಾಕಿ ದರ್ಬಾರ್, ಮದನ್ ಜೊತೆಗಿರಲು ಯುವಕರ ಪಡೆ ನಿರ್ಧಾರ್

    ಮಂಗಳೂರು,ಜನವರಿ 20: ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಖಾಕಿ ರಾಜಕೀಯ ರಂಗಕ್ಕೆ ಇಳಿದಿದ್ದಾರೆ.

    ಮುಂಬರುವ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ದರಿಸಿರುವ ಮದನ್ ಚುನಾವಣೆಯ ಪ್ರಚಾರ ಈಗಾಗಲೇ ಆರಂಭಿಸಿದ್ದಾರೆ.

    ಒರ್ವ ಯುವ ನಾಯಕನಾಗಿ ಮೂಡಿಬಂದಿರುವ ಮದನ್ ರಾಜಕೀಯ ಪ್ರವೇಶಿಸುತ್ತಿರುವ ನಿರ್ಧಾರವನ್ನು ಸ್ವಾಗತಿಸಿರುವ ಯುವ ಸಮುದಾಯ ಮದನ್ ಪರ ಪ್ರಚಾರ ಆರಂಭಿಸಿವೆ.

    ಮೂಲತಃ ಕೊಡಗಿನವರಾದ ಮದನ್ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.

    ಬಳಿಕ ಬಂದರು ಹಾಗು ನಂತರ ಬಜಪೆ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮದನ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

    ಮಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸದಾ ಸಾಮಾಜಿಕ ಕಳಕಳಿಯ ಕೆಲಸ ಮಾಡಿದ್ದ ಮದನ್ ಅವರನ್ನು ಇಷ್ಟಪಡುವ ಯುವಕರ ದಂಡೇ ಮಂಗಳೂರಿನಲ್ಲಿದೆ.

    ರಾಮಕೃಷ್ಣ ಮಿಷನ್ ಆರಂಭಿಸಿದ್ದ ಸ್ವಚ್ಛ ಮಂಗಳೂರು ಆಂದೋಲನದಲ್ಲಿ ಮದನ್ ಸಕ್ರಿಯರಾಗಿ ತೊಡಗಿಸಿ ಕೊಂಡಿದ್ದರು.

    ಈ ಹಿನ್ನೆಲೆಯಲ್ಲಿ ಯುವ ಮನಸ್ಸುಗಳೊಂದಿಗೆ ಬೆರೆಯುತ್ತಿದ್ದ ಮದನ್ ಯುವ ಸಮೂಹದಲ್ಲಿ ಹೆಚ್ಚು ಜನಪ್ರೀಯರಾಗಿದ್ದಾರೆ.

    ಯುವಕರ ತಂಡಗಳು ಈಗಾಗಲೇ ಮಂಗಳೂರಿನಲ್ಲಿ ಮದನ್ ಪರ ಪ್ರಚಾರ ಆರಂಭಿಸಿವೆ.

    ವ್ಯವಸ್ಥೆಯ ಬದಲಾವಣೆಗಾಗಿ ಮದನ್ ಅವರನ್ನು ಬೆಂಬಲಿಸಿ ಎಂದು ಕರೆ ನೀಡಲಾಗುತ್ತಿದೆ.

    ಸ್ವಸ್ಥ ಮಂಗಳೂರಿಗಾಗಿ “ಐ ಸಪೋರ್ಟ್ ಮದನ್” ಎಂದು ಬರೆದಿರುವ ಫ್ಲೆಕ್ಸಗಳನ್ನು ಹೊತ್ತ ವಾಹನಗಳು ಮಂಗಳೂರಿನಲ್ಲಿ ಪ್ರಚಾರ ಆರಂಭಿಸಿವೆ.

    ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಯಿಂದ ಕಣಕ್ಕಿಳಿಯು ಇರಾದೆ ಮದನ್ ಹೊಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗು ಸಂಘಪರಿವಾರದ ನಾಯಕರೊಂದಿಗೆ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗಿದೆ.

    ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಕಾಂಗ್ರೆಸಿನ ಜೆ.ಆರ್ ಲೋಬೋ ಕೂಡ ಈ ಹಿಂದೆ ಮಂಗಳೂರಿನಲ್ಲಿ ಕೆ ಎ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು.

    ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಲೋಬೋ ನಿವೃತ್ತಿ ಬಳಿಕ ಕಳೆದ ಬಾರಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದರು.

    ಈ ಬಾರಿಯೂ ಕಾಂಗ್ರೆಸ್ ನಿಂದ ಲೋಬೋ ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ, ಬಿಜೆಪಿಯಲ್ಲಿ ಮದನ್ ಅಭ್ಯರ್ಥಿಯಾದರೆ ಚುನಾವಣೆಯ ಅಖಾಡದಲ್ಲಿ ಅಧಿಕಾರಿಗಳಿಬ್ಬರ ನಡುವೆ ಫೈಟ್ ಕುತೂಹಲ ಕೆರಳಿಸಲಿದೆ.

    ಬಿಜೆಪಿ ಯಿಂದ ಸ್ಪರ್ದಿಸಲು ಅವಕಾಶ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣ ಕಣಕ್ಕಿಳಿಯಲು ಮದನ್ ಸಿದ್ದರಾಗಿದ್ದಾರೆ.

    ಆದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ದಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಮದನ್ ಸ್ಪಷ್ಟ ಪಡಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply