BANTWAL
ಗಾಲಿ ಜನಾರ್ಧನ ರೆಡ್ಡಿಯಿಂದ ಭಿಕ್ಷಾಂದೇಹಿ ಅಭಿಯಾನಕ್ಕೆ ಸಾಥ್ ಕಲ್ಲಡ್ಕ ವಿದ್ಯಾಕೇಂದ್ರಕ್ಕೆ 26 ಲಕ್ಷ ದೇಣಿಗೆ
ಬಂಟ್ವಾಳ, ಆಗಸ್ಟ್ 22 : ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿದರು. ಇಂದು ಬೆಳಗ್ಗೆ ವಿದ್ಯಾಕೇಂದ್ರದ ಭೇಟಿ ನೀಡಿದ ಅವರು ವಿದ್ಯಾಕೆಂದ್ರದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇತ್ತಿಚೆಗೆ ರಾಜ್ಯ ಸರ್ಕಾರ ಕಲ್ಲಡ್ಕ ಶಾಲೆಗೆ ಮಧ್ಯಾಹ್ನದ ಅನ್ನದಾನದ ಅನುದಾನ ಕಡಿತ ಗೊಳಿಸಿ ಹಿನ್ನೆಯಲ್ಲಿ ಶಾಲೆಯ ಹಿತೈಷಿಗಳ ಭಿಕ್ಷಾಂದೇಹಿ ಅಭಿಯಾನಕ್ಕೆ ಜನಾರ್ದನ ರೆಡ್ಡಿ ಸಾಥ್ ನೀಡಿದ್ದು, 26 ಲಕ್ಷ ರೂಪಾಯಿ ದೇಣಿಗೆಯನ್ನು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮೂಲಕ ಶಾಲಾ ಆಡಳಿತ ಮಂಡಳಿಗೆ ಒಪ್ಪಿಸಿದರು.ಮಹೇಶ್ ವಿಕ್ರಂ ಹೆಗ್ಡೆ ಮತ್ತು ತಂಡ ಆರಂಭಿಸಿದ್ದ ಭಿಕ್ಷಾಂದೇಹಿ ಅಭಿಯಾನ ಯಶಸ್ವಿಯಾಗುತ್ತಿದ್ದು ಭಿಕ್ಷಾಂದೇಹಿ’ ಆನ್ ಲೈನ್ ಅಭಿಯಾನದ ಮೂಲಕ ದೇಣಿಗೆ ಸಂಗ್ರಹಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ ಅಭಿಯಾನಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದೆ. ಭಿಕ್ಷಾಂದೇಹಿ ಅಭಿಯಾನಕ್ಕೆ ಈಗಾಗಲೇ 38 ಲಕ್ಷ ಹಣ ಹಾಗೂ 5,000 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ ಎಂದು ಅಭಿಯಾನದ ರೂವಾರಿ ಮಹೇಶ್ ವಿಕ್ರಮ್ ಶೆಟ್ಟಿ ತಿಳಿಸಿದ್ದಾರೆ.
ವಿಡಿಯೋಗಾಗಿ ಲಿಂಕನ್ನು ಒತ್ತಿರಿ..
You must be logged in to post a comment Login