Connect with us

  BELTHANGADI

  ಗಲ್ಫ್ ನಲ್ಲಿ ಸಂಕಷ್ಟದಲ್ಲಿದ್ದ ಯುವಕ ತಾಯ್ನಾಡಿಗೆ

  ಬೆಳ್ತಂಗಡಿ, ಆಗಸ್ಟ್ 08:ಕೊಲ್ಲಿ ರಾಷ್ಟ್ರ ಕತಾರ್ ನಲ್ಲಿ ಉದ್ಯೋಗದಾತನಿಂದ ಮೋಸಹೋಗಿ ಸಂಕಷ್ಟದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕಿಲ್ಲೂರು, ನಾಡದ ಅಬ್ದುಲ್ ಹಮಿದ್ ಎಂಬುವರನ್ನು ಕತಾರ್ ಕೆಸಿಎಫ್ ತಂಡದ ಸದಸ್ಯರು ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾರೆ.

  ಅಬ್ದುಲ್ ಹಮೀದ್ ಕತಾರ್ ನಲ್ಲಿ ಚಾಲಕನಾಗಿ ಕೆಲವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅಲ್ಲಿನ ಪರಿಚಯದ ವ್ಯಕ್ತಿಯೋರ್ವ ಹೆಚ್ಚಿನ ವೇತನ ನೀಡುವ ಅಮಿಷವೊಡ್ಡಿ ಘನವಾಹನ ಚಾಲನೆ ಉದ್ಯೋಗಕ್ಕೆ ಕರೆಸಿಕೊಂಡಿದ್ದ.ಆರಂಭದಲ್ಲಿ ಸುಲಭವಾಗಿದ್ದ ಕೆಲಸ ಬಳಿಕ 20 ಗಂಟೆಗಳಷ್ಟು ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಕಂಪೆನಿಯವರಲ್ಲಿ ಅಂಗಲಾಚಿದರೂ ಕೆಲಸದಿಂದ ಬಿಡುಗಡೆ ಮಾಡಲಿಲ್ಲ.ರಾಯಭಾರಿ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ.ಅಬ್ದುಲ್ ಹಮೀದ್ ಅವರ ಸಂಕಷ್ಟ ಕೆಸಿಎಫ್ ನಾಯಕರ ಗಮನಕ್ಕೆ ಬಂದಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದರು. ಕಾರ್ಯದರ್ಶಿ ಅಬ್ದುಲ್ ರಹೀಮ್ ಸಅದಿ ಮತ್ತು ಸಾಂತ್ವನ ವಿಭಾಗದ ನಾಯಕ ಅಬ್ದುಲ್ ರಝಾಕ್ ಮುಂಡ್ಕೂರು ಸೇರಿಕೊಂಡು ಫಾರೂಕ್ ಕೃಷ್ಣಾಪುರ ಮತ್ತು ಇಮ್ರಾನ್ ಕೂಳೂರು ಅವರ ಸಹಕಾರದೊಂದಿಗೆ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply