Connect with us

    DAKSHINA KANNADA

    ಕೊಂಚಾಡಿ ಕಾಶಿಮಠದಲ್ಲಿ ಗಣೇಶನ ವಿಸರ್ಜನೆ

    ಮಂಗಳೂರು, ಸೆಪ್ಟೆಂಬರ್ 01: ಮಂಗಳೂರಿನ ಕೊಂಚಾಡಿ ಶ್ರೀ ಕಾಶಿಮಠ ದಲ್ಲಿ ಗಣೇಶೋತ್ಸವ ಪ್ರಯುಕ್ತ ಗಣಪತಿ ದೇವರ ಮ್ರಿತಿಕಾ ವಿಗ್ರಹದ ವಿಸರ್ಜನಾ ಕಾರ್ಯಕ್ರಮ ಗುರುವಾರದಂದು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.  ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಪೂಜಿಸಲ್ಪಟ್ಟ ಶ್ರೀ ಮಹಾ ಗಣಪತಿ ದೇವರ ಮ್ರಿತಿಕಾ ವಿಗ್ರಹದ ವಿಸರ್ಜನಾ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಕಾಶೀಮಠದಲ್ಲಿ ಕಳೆದ ಏಳು ದಿನಗಳಿಂದ ಪೂಜಿಸಲ್ಪಡುತ್ತಿದ್ದ ಗಣೇಶನ ವಿಗ್ರಹ ವಿಸರ್ಜನೆಯ ಪ್ರಯುಕ್ತ ಆಕರ್ಷಕ ಶೋಭಾಯಾತ್ರೆಯೂ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪದವಿನಂಗಡಿ ದೇವಿ ಕಟ್ಟೆಯವರೆಗೆ ಸಾಗಿ ಮತ್ತೆ ದೇವಸ್ಥಾನಕ್ಕೆ ಹಿಂತಿರುಗುವ ಮೂಲಕ ಸಮಾಪನಗೊಂಡಿತು.  ಗಣೇಶ ವಿಗ್ರಹದ ಮೆರವಣಿಗೆಯಲ್ಲಿ ಆಕರ್ಷಕ ಸ್ಥಬ್ಧ ಚಿತ್ರಗಳು, ಸಿಡಿಮದ್ದುಗಳ ಪ್ರದರ್ಶನವೂ ನಡೆಯಿತು. ವಿಗ್ರಹ ವಿಸರ್ಜನೆಯ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ವಿಗ್ರಹವನ್ನು ದೇವಸ್ಥಾನದ ಪುಷ್ಕರಿಣಿಯಲ್ಲಿ ವಿಸರ್ಜನೆ ಮಾಡಲಾಯಿತು. 

    ಕೃಪೆ: ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply