Connect with us

DAKSHINA KANNADA

ಚೀನಾ ವಸ್ತುಗಳ ಬಹಿಷ್ಕಾರ , VHPಯಿಂದ ದೇಶದಾದ್ಯಂತ ಆಂದೋಲನ.

Share Information

ಮಂಗಳೂರು, ಸೆಪ್ಟಂಬರ್ 1: ದೇಶದಾದ್ಯಂತ ಇಂದು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಮಂಗಳೂರಿನಲ್ಲೂ ಸಂಘಟನೆಯ ಕಾರ್ಯಕರ್ತರು ಆಂದೋಲನವನ್ನು ನಡೆಸಿದರು.

ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಚೀನಾ ನಿರ್ಮಿತ ಆಟಿಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಇತರ ಚೀನಾದಿಂದ ಆಮದಾದ ವಸ್ತುಗಳನ್ನು ಸುಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಚೀನಾ ಹಾಗೂ ಭಾರತದ ಗಡಿಭಾಗವಾದ ಡೋಕ್ಲಾಮ್ ನಲ್ಲಿ ಚೀನಾ ಸರಕಾರದ ಪ್ರಾಯೋಜಕತ್ವದಲ್ಲಿ ಅಲ್ಲಿನ ಸೇನೆ ಭಾರತದ ಸೇನೆಗೆ ನಿರಂತರ ಉಪಟಲವನ್ನು ಕೊಡುತ್ತಿದ್ದು, ಗಡಿಯಲ್ಲಿ ಬಿಗುವಿನ ವಾತಾವರಣವನ್ನೂ ನಿರ್ಮಿಸಿದೆ. ಅಲ್ಲದೆ ಅರುಣಾಚಲಪ್ರದೇಶವನ್ನೂ ಚೀನಾ ತನ್ನದೆಂದು ಖ್ಯಾತೆ ತೆಗೆಯುತ್ತಿದ್ದು, ಚೀನಾದ ಇಂಥಹ ಆಕ್ರಮಶೀಲತೆಗೆ ಹೊಡೆತ ನೀಡಲು ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರದಿಂದಲೇ ಸಾಧ್ಯ ಎನ್ನುವ ಮಾತು ಆಂದೋಲನದಲ್ಲಿ ಕೇಳಿಬಂತು.

ಚೀನಾದ ಆರ್ಥಿಕತೆಯು ಭಾರತೀಯ ಮಾರುಕಟ್ಟೆಯನ್ನು ಅವಲಂಭಿಸಿದ್ದು, ಆ ದೇಶದ ಆರ್ಥಿಕತೆಯ 17 ಶೇಕಡಾ ಭಾರತದಿಂದಲೇ ಹೋಗುತ್ತಿದೆ. ಒಂದು ವೇಳೆ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದೇ ಆದಲ್ಲಿ ಆ ದೇಶದ ಆರ್ಥಿಕ ಶಕ್ತಿಗೆ ಭಾರೀ ಹೊಡೆತ ಬೀಳಲಿದೆ ಎಂದು ಆಂದೋಲನವನ್ನು ಉದ್ಧೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.

 

ವಿಡಿಯೋ


Share Information
Advertisement
Click to comment

You must be logged in to post a comment Login

Leave a Reply