LATEST NEWS
ಕೈಕೋಳದಿಂದ ಪೊಲೀಸರ ಕೊಲೆಗೆ ಯತ್ನ
ಕೈಕೋಳದಿಂದ ಪೊಲೀಸರ ಕೊಲೆಗೆ ಯತ್ನ
ಮಂಗಳೂರು ನವೆಂಬರ್ 8: ದರೊಡೆ ಆರೋಪಿ ಪೊಲೀಸರ ಕೊಲೆಗೆ ಯತ್ನ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಿವಿಎಸ್ ವೃತ್ತದಲ್ಲಿ ಈ ಘಟನೆ ನಡೆದಿದೆ.
ದರೋಡೆ ಪ್ರಕರಣ ಆರೋಪಿಯಾಗಿದ್ದ ರಹಮಾನ್ ಎಂಬವರನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಆರೋಪಿ ರಹಮಾನ್ ತನ್ನ ಕೈಕೋಳದ ಸಂಕೋಲೆಯನ್ನು ಪೊಲೀಸರ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
You must be logged in to post a comment Login