DAKSHINA KANNADA
ಟಿಪ್ಪು ಜಯಂತಿ , ಬಿಜೆಪಿ ಪರಿವರ್ತನಾ ರಾಲಿ ಹಿನ್ನಲೆ , ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಕಾವಲು

ಟಿಪ್ಪು ಜಯಂತಿ , ಬಿಜೆಪಿ ಪರಿವರ್ತನಾ ರಾಲಿ ಹಿನ್ನಲೆ , ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಕಾವಲು
ಮಂಗಳೂರು, ನವಂಬರ್ 8: ನವಂಬರ್ 10 ರಂದು ಟಿಪ್ಪು ಜಯಂತಿಯ ಆಚರಣೆಯ ಜೊತೆಗೆ ಬಿಜೆಪಿಯ ಪರಿವರ್ತನಾ ರಾಲಿಯೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನವಂಬರ್ 10 ರಂದು ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಆಚರಿಸಲು ಅನುಮತಿ ನೀಡಲಾಗಿದ್ದು, ಪರ್ಯಾಯ ಟಿಪ್ಪು ಜಯಂತಿಗೆ ಅವಕಾಶವನ್ನು ಈಗಾಗಲೇ ನಿಶೇಧಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯಂದೇ ಬಿಜೆಪಿ ಪಕ್ಷದ ಪರಿವರ್ತನಾ ರಾಲಿ ನಡೆಯುವ ಹಿನ್ನಲೆಯಲ್ಲಿ ಬಂದೋಬಸ್ತ್ ಗಾಗಿ ಜಿಲ್ಲೆಯಲ್ಲಿ 2000 ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದ ಅವರು 13 KSRP ತುಕಡಿ, 1 RAF ತುಕಡಿಯನ್ನು ಕರೆಸಿಕೊಳ್ಳಲಾಗಿದೆ ಎಂದರು. ಶಾಂತ ಭಂಗ ಸಭೆಗಳನ್ನು ಈಗಾಗಲೇ ಮಾಡಲಾಗಿದ್ದು, 128 ಮಂದಿಯಿಂದ ಬಾಂಡ್ ಕೂಡಾ ಪಡೆಯಲಾಗಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಬಳಿಕ ಜಿಲ್ಲೆಯಲ್ಲಿ ನಿಶೇಧಾಜ್ಞೆ ಹಾಕುವ ಕುರಿತು ನಿರ್ಧರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಮಂಗಳೂರು ಪೋಲೀಸ್ ಕಮಿಷನರ್ ಟಿ.ಆರ್ ಸುರೇಶ್, ಐಜಿಪಿ ಹೇಮಂತ್ ನಿಂಬಾಲ್ಕರ್ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸುಧೀರ್ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.