ಮಂಗಳೂರು, ಆಗಸ್ಟ್ 09 : ನವಮಂಗಳೂರು ಮೀನುಗಾರಿಕಾ ಬಂದರಿನ ನಿರ್ವಸಿತರ ಬಹುಕಾಲದ ಬೇಡಿಕೆಯಾಗಿದ್ದ ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿ ರೂ.196.00 ಕೋಟಿ ಅನುದಾನ ಬಿಡುಗಡೆಗೊಳಿಸಿದೆ..ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮೀನುಗಾರಿಕಾ ಕ್ಷೇತ್ರದ  ಪದಾಧಿಕಾರಿಗಳ ನಿಯೋಗವು ಆಗಸ್ಟ್ 8 ರಂದು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಯೋಜನೆಗೆ ರೂ.32.20 ಕೋಟಿ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್,ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಮೋಹನ್ ಬೆಂಗ್ರೆ, ಕರ್ನಾಟಕ ಕರಾವಳಿ ಮೀನುಗಾರರ ಕ್ರೀಯಾ ಸಂಘದ ಅಧ್ಯಕ್ಷರಾದ ಮನೋಹರ್ ಬೋಳೂರು, ಮೀನುಗಾರ ಪ್ರಮುಖರಾದ ಅನಿಲ್ ಕುಮಾರ್, ಇಬ್ರಾಹಿಂ ಬೆಂಗ್ರೆ, ನವೀನ್ ಬಂಗೇರ, ಬಾಬು ಉಳ್ಳಾಲ್, ದಯಾನಂದ ಇವರು ಉಪಸ್ಥಿತರಿದ್ದರು.

Facebook Comments

comments