ಸುಳ್ಯ, ಆಗಸ್ಟ್ 08 :ಭಾರತೀಯ ಮೂಲದ ಅಮೆರಿಕದ ಪ್ರಜೆ ಒಬಾಮಾ ಒಡನಾಡಿ ಸೆನೆಟ್ ಪ್ರತಿನಿಧಿಯಾಗಿರುವ ತಮಿಳುನಾಡಿನ ರಾಧಾ ಕೃಷ್ಣಮೂರ್ತಿ ಹಾಗೂ ಅವರ ತಾಯಿ ವಿಜಯ ಕೃಷ್ಣಮೂರ್ತಿ ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗ ಪ್ರತಿಷ್ಠೆ ಹಾಗೂ ಪಂಚಾ ಅಭಿಷೇಕ ಸೇವೆ ಪೂರೈಸಿದರು. ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ್ ನಂಬೀಸನ್ ಅವರು ರಾಧಾಕೃಷ್ಣ ಮೂರ್ತಿ ಅವರನ್ನು ಬರಮಾಡಿಕೊಂಡರು. ನಲವತ್ತು ವರ್ಷಗಳಿಂದ ಅಮೆರಿಕದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಅವರು ಒಬಾಮಾ ಅವರ ಒಡನಾಡಿ. ಸೆನೆಟ್ ಪ್ರತಿನಿಧಿಯ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅಮೆರಿಕದ ಚಿಕಾಗೋದಲ್ಲಿ ಹಿಂದೂ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ಬೆಂಗಳೂರಿನ ಜ್ಯೋತಿಷಿ ನಾಗೇಂದ್ರರಾವ್ ಅವರ ಸಲಹೆಯಂತೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಹೊತ್ತುಕೊಂಡಿದ್ದರು. ಇದೀಗ ಹರಕೆ ಈಡೇರಿಸಲು ಕ್ಷೇತ್ರಕ್ಕೆ ಬಂದಿರುವುದಾಗಿ ರಾಧಾಕೃಷ್ಣ ಮೂರ್ತಿ ತಿಳಿಸಿದ್ದಾರೆ.

Facebook Comments

comments