ಕರೆಂಕಿ ದುರ್ಗಾ ಫೆಂಡ್ಸ್ ಕ್ಲಬ್ ಸದಸ್ಯರಿಂದ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ

ಬೆಳ್ತಂಗಡಿ, ಫೆಬ್ರವರಿ 06 : ಬಂಟ್ವಾಳದ ಕರೆಂಕಿಯಲ್ಲಿ ಸರ್ಕಾದಿಂದ ಬಿಡಿಗಾಸಿನ ಸಹಾಯ ಕೂಡ ಪಡೆಯದೆ ಜನರಿಂದ ಮತ್ತು ಸ್ವತ ತಾನೇ ದುಡಿದ ಹಣವನ್ನು ವಿನಿಯೋಗಿಸುವ ಮೂಲಕ ರಾಜ್ಯಕ್ಕೆ ಮಾದರಿ ಸರಕಾರಿ ಶಾಲೆ ನಿರ್ಮಿಸಿ ಕೊಟ್ಟ ಪ್ರಕಾಶ್ ಅಂಚನ್ ಮತ್ತು ಅವರ ತಂಡ ಇದೀಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.

ಇವರ ನೇತ್ರತ್ವದ ತಂಡ ಕರೇಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಹಾಗೂ ಸರಕಾರಿ ಶಾಲೆ ಉಳಿಸಿ ರಾಜ್ಯ ಸಮಿತಿ ವತಿಯಿಂದ ಮತ್ತೊಂದು ಕ್ರಾಂತಿಕಾರಿ ಹೋರಾಟ ಆರಂಭಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ದಡ್ಡಲಕಾಡು ಶಾಲೆಯ ಮಾದರಿಯಲ್ಲಿಯೇ ಬೆಳ್ತಂಗಡಿ ತಾಲೂಕಿನ ಮರೊಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಶಾಲೆ ಉಳಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಇದಕ್ಕೆ ಪೂರಕವಾಗಿ ಈ ಉತ್ಸಾಹಿ ತಂಡ ತನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಇದೇ ಮೊದಲ ಬಾರಿಗೆ ಬೆಳ್ತಂಗಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಮನೆ ಮನೆ ಭೇಟಿ ನೀಡಿ, ಪಾಲಕರು, ಹತ್ತವರು ಹಾಗೂ ಊರಿನ ಮಹನೀಯರು , ಶಿಕ್ಷಣಾಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಯಾಕಾಗಿ ಉಳಿಸಬೇಕೆಂದು ಮನದಟ್ಟು ಮಾಡುವ ಕಾರ್ಯಕೂಡ ಮಾಡಿದ್ದಾರೆ. ಇವರ ಈ ಅಭಿಯಾನಕ್ಕೆ ಗ್ರಾಮಸ್ಥರ, ಶಿಕ್ಷಣ ಪ್ರೇಮಿಗಳ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದೆ. 16 ಮಕ್ಕಳಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಕೂಕ್ರಬೆಟ್ಟು ಶಾಲೆ ಮತ್ತೆ ಬೆಳಗುವ ಆಶಾಕಿರಣ ಮೂಡಿ ಬಂದಿದೆ.

ಹಿಂದೂ ಯೂವ ಶಕ್ತಿ ಆಲಡ್ಕ , ರಾಜಾ ಕೇಸರಿ ಬೇಳ್ತಂಗಡಿ ಹಳೇ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ ಎಲ್ಲವೂ ಅಂದು ಕೊಂಡಂತೆ ನಡೆದರೆ ಕೂಕ್ರಬೆಟ್ಟು ಸರಕಾರಿ ಶಾಲೆಯಲ್ಲೂ ಮತ್ತೆ ಗತ ಕಾಲದ ವೈಭವ ಮೂಡಿ ಬರಲಿದೆ.

Facebook Comments

comments