ಹಂಪಿ ವಿರೂಪಾಕ್ಷನ ದರ್ಶನ ಪಡೆದ ಯುವರಾಜ

ಮೈಸೂರು, ಫೆಬ್ರವರಿ 06 : ಮೈಸೂರು ಸಂಸ್ಥಾನದ ಯುವ ರಾಜ ಯಧುವೀರ್ ಓಡೆಯರ್ ಕಳೆದೆರೆಡು ದಿನಗಳಿಂದ ಹಂಪಿ ಪ್ರವಾಸದಲ್ಲಿದ್ದಾರೆ. ಈ ಪ್ರಯುಕ್ತ ಅವರು ನಿನ್ನೆ ರಾತ್ರಿ ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದರು.

ದೇವಾಲಯಕ್ಕೆ ಇದೇ ಮೊದಲ ಬಾರಿ ಆಗಮಿಸಿದ್ದ ಯುರಾಜರನ್ನು ಆಡಳಿತ ಮಂಡಳಿ ಆದಾರದಿಂದ ಸ್ವಾಗತಿಸಿತು.

ಇದೇ ವೇಳೆ ಹಂಪಿ ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿಯುವರಾಜನಿಗೆ ಶಾಲು ಹಾಕಿ ಸನ್ಮಾನಿಸಿ ಗೌರವಿಸಿತು.

ಬಳಿಕ ಯುವರಾಜ ಯದುವೀರ್ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಶಿಲ್ಪಕಲೆ ಬಗ್ಗೆ ಮಾಹಿತಿ ಪಡೆದುಕೊಂಡರು.

Facebook Comments

comments