Connect with us

    DAKSHINA KANNADA

    ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ

    ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ

    ಮಂಗಳೂರು ನವೆಂಬರ್ 14: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟ ಸೋಮವಾರ ರಾತ್ರಿ ಆರಂಭಗೊಂಡಿದೆ ಇತ್ತೀಚೆಗೆ ನಡೆದ ವರ್ಗಾವಣೆ ರಾಜಿನಾಮೆ ಬಂಡಾಯದ ಸುದ್ದಿಗಳ ನಡುವೆ ಯಕ್ಷಗಾನ ಮೇಳಗಳು ತಮ್ಮ ತಿರುಗಾಟ ಆರಂಭಿಸಿವೆ.

    ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿನ್ನೆ ಸಂಜೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಗೆಜ್ಜೆ ಮುಹೂರ್ತ ನಡೆಯಿತು. ಕ್ಷೇತ್ರ ಕಟೀಲಿನ  ಅರ್ಚಕ ಅನಂತಪದ್ಮನಾಭ ಅಸ್ರಣ್ಣ 6 ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು. ಎಲ್ಲಾ 6 ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳು ಭಾಗವತಿಕೆ ಹಿಮ್ಮೇಳ ಗಳ ಸಹಿತ ಯಕ್ಷ ನಾಟ್ಯ ಪ್ರದಕ್ಷಿಣೆ, ಗಣಪತಿ ಸನ್ನಿಧಿಯಲ್ಲಿ ಯಕ್ಷಗಾನ ನಾಟ್ಯ ಸೇವೆ ನಡೆಸಿದರು.

    6 ಮೇಳಗಳ ದೇವರ ಪೆಟ್ಟಿಗೆ ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ಸಲ್ಲಿಸಲಾಯಿತು . ನಂತರ 6 ಯಕ್ಷಗಾನ ಮೇಳಗಳ ಕ್ಷೇತ್ರದ ರಥಬೀದಿಯಲ್ಲಿ ನಿರ್ಮಿಸಲಾಗಿದ್ದ 6 ಯಕ್ಷ ರಂಗಗಳಲ್ಲಿ ನಿನ್ನೆ ರಾತ್ರಿ ಬಯಲಾಟ ಪ್ರದರ್ಶನ ನಡೆಯಿತು.

    ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದದಿಂದ ಹೊರಡುವ ಆರೂ ಮೇಳಗಳು ಈ ಬಾರಿ ಹೊಸ ರೂಪದಿಂದ ಹೊರಡಲಿದೆ. ಮೇಳಗಳ ತಿರುಗಾಟಕ್ಕಿದ್ದ ಬಸ್‍ಗಳೆಲ್ಲವೂ ಹಳೆಯದಾಗಿರುವುದರಿಂದ ಅವುಗಳ  ಬದಲಿಗೆ ಈ ವರ್ಷದಿಂದ ಕಲಾವಿದರು ಹಾಗೂ ಸಿಬ್ಬಂದಿಗಳಿಗೆ ಉಪಯೋಗವಾಗುವಂತೆ ವಿಷೇಶ ವಾಗಿ ವಿನ್ಯಾಸಗೊಳಿಸಿದ ಹೊಸ ಬಸ್ಸುಗಳನ್ನು ಈ ಬಾರಿ ಒದಗಿಸಲಾಗಿದೆ.

    ಜೊತೆಗೆ ಸಾಮಾಗ್ರಿಗಳ ಸಾಗಾಣಿಕೆಗೆ ಪ್ರತ್ಯೇಕ ಆರು ಲಾರಿಗಳನ್ನು ಮೇಳಕ್ಕೆ ನೀಡಲಾಗಿದ್ದು ಅದಲ್ಲದೇ ಸೇವಾದಾರರಿಗೆ ಉಪಯೋಗವಾಗುವಂತೆ ರಂಗಸ್ಥಳ ಮತ್ತು ಚೌಕಿಗೆ ವಿದ್ಯುದಲಂಕಾರ ಧ್ವನಿವರ್ಧಕಗಳನ್ನು, ಪ್ರತೀ ಮೇಳಕ್ಕೆ ಎರಡು ಹೊಸ ಜನರೇಟರ್‍ಗಳನ್ನು  ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply