ಮಂಗಳೂರು ಅಗಸ್ಟ್ 19 : ಅತ್ತೆಯ ಕಿರುಕುಳದಿಂದಾಗಿ ಮನನೊಂದ ಸೊಸೆ ಐಸ್ ಕ್ರೀಂ ನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಒಳಚಿಲ್ ನಿವಾಸಿ ಶಮೀನಾ ಮೃತಪಟ್ಟ ಮಹಿಳೆ. ಮೂಲತಃ ಗುರುಪುರ ನಿವಾಸಿಯಾಗಿರುವ ಶಮೀನಾ ಕೆಲವು ವರ್ಷಗಳ ಹಿಂದೆ ಒಳಚ್ಚಿಲ್ ನಿವಾಸಿ ಇಕ್ಬಾಲ್ ಎಂಬವರನ್ನು ಮದುವೆಯಾಗಿದ್ದರು. ಇಕ್ಬಾಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಗಂಡನ ಮನೆಯಲ್ಲಿದ್ದ ಶಮೀನಾಗೆ ಅತ್ತೆ ಬಿ. ಫಾತಿಮಾ ವಿನಾಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮನನೊಂದ ಶಮೀನಾ ಆಗಸ್ಟ್ 8 ರಂದು ಐಸ್ ಕ್ರೀಂ ಜೊತೆ ಇಲಿ ಪಾಷಾಣ ಸೇವಿಸಿ ಸೇವಿಸಿದ್ದರು. ಎರಡು ದಿನ ಯಾವುದೇ ಸಮಸ್ಯೆಯಾಗದಿದ್ದರೂ ಆಗಸ್ಟ್ 10 ರಂದು ಶಮೀನಾ ಗೆ ವಾಂತಿ ಪ್ರಾರಂಭವಾಗಿದೆ ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪರಿಸ್ಥಿತಿ ಉಲ್ಬಣಿಸಿ ಆಗಸ್ಟ್ 10 ರಂದು ಕೋಮಾ ಸ್ಥಿತಿ ತಲುಪಿದ್ದ ಶಮೀನಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .

Facebook Comments

comments