ಉಡುಪಿ , ಆಗಸ್ಟ್ 19 : ಪರ್ಯಾಯ ಪೀಠಾಧಿಪತಿ ಉಡುಪಿ ಪೇಜಾವರ ಶ್ರೀ ಗಳು ನಾಳೆ ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ .  ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಾಳೆ ವಿಶ್ವೇಶ ತೀರ್ಥ ಸ್ವಾಮಿಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ.

86 ವಯಸ್ಸಿನ ಪೇಜಾವರ ಶ್ರೀ ಗಳು ಹರ್ನಿಯಾ ನೋವು ಹೊರತುಪಡಿಸಿದರೆ ಲವಲವಿಕೆಯಿಂದಲೇ ಇದ್ದು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಸದ್ಯ ಉಡುಪಿ ಶ್ರೀ ಕೃಷ್ಣ ಮಠದಲ್ಲಿ  ಪರ್ಯಾಯ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಪೇಜಾವರ ಶ್ರೀ ಗಳು ಎಂದಿನಂತೆ ಇಂದು ಕೂಡ ಎಲ್ಲಾ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸಿದ್ದರು .

ನಾಳೆ  ಆದಿತ್ಯವಾರ ಅಪರಾಹ್ನ ಮಹಾಪೂಜೆಯ ಬಳಿಕ ಪೇಜಾವರ ಶ್ರೀ ಗಳು ಮಣಿಪಾಲ ಆಸ್ಪತ್ರೆಗೆ ತೆರಳಲಿದ್ದಾರೆ ಮತ್ತು ಶಸ್ತ್ರಕ್ರೀಯೆಗೆ ಒಳಗಾಗಲಿದ್ದಾರೆ. ಒಂದು ದಿನದ ಚಿಕಿತ್ಸೆಯ ಬಳಿಕ  ಸೋಮವಾರ ಶ್ರೀ ಗಳು ಆಸ್ಪತ್ರೆಯಿಂದ ಬಿಡುಗಡೆಹೊಂದಿ ಮಠಕ್ಕೆ ಮರಳಲಿದ್ದಾರೆ.

ಈ ಬಗ್ಗೆ  ಹೇಳಿಕೆ ನೀಡಿರುವ ಮಠದ ಆಡಳಿತ ಮಂಡಳಿ ಇದೊಂದು ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆಆಗಿದ್ದು ಸಾರ್ವಜನಿಕರು ಹಾಗೂ ಭಕ್ತರು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು  ಹೇಳಿದೆ.

Facebook Comments

comments