Connect with us

    BANTWAL

    ಏನು ಮಾಯವೋ, ಏನು ಮರ್ಮವೋ…ಸ್ಕೂಟರ್ ಓಡದಿದ್ರೂ ಕೇಸು ಬೀಳುವುದು..!!

    ಬಂಟ್ವಾಳ, ಅಗಸ್ಟ್ 5: ನಿಮ್ಮ ಮನೆಯಲ್ಲಿ ಬೈಕೋ, ಕಾರೋ ಇದ್ದಲ್ಲಿ ಇನ್ನುಂದೆ ಸ್ವಲ್ಪ ಎಚ್ಚರ ವಹಿಸಿಕೊಳ್ಳಿ. ಯಾಕಂದ್ರೆ ನಿಮ್ಮ ಮನೆ ಬೈಕು, ಕಾರು ರಸ್ತೆಗಿಳಿಯದಿದ್ದರೂ, ಆ ವಾಹನಗಳ ನಂಬರ್ ಮೇಲೆ ಕೇಸು ಬೀಳುವ ಸಾಧ್ಯತೆಯಿದೆ. ಹೌದು ಇದಕ್ಕೊಂದು ನಿದರ್ಶನ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ.

    ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವು ನಿವಾಸಿ ಜೋಸ್ಸಿ ಐವನ್ ಡಿಸೋಜಾ ತನ್ನ ಮನೆ ಕೆಲಸಕ್ಕಾಗಿ KA-19 ED 7933 ನಂಬರಿನ ಅಕ್ಟೀವ್ ಹೊಂಡಾ ಸ್ಕೂಟರ್ ರನ್ನು ಬಳಸುತ್ತಿದ್ದವರು. ಯಾವತ್ತೂ ಮಂಗಳೂರು ನಗರಕ್ಕೆ ತನ್ನ ಸ್ಕೂಟರ್ ನಲ್ಲಿ ಹೊರಟವರಲ್ಲ. ಆದರೆ ಜುಲೈ 17 ರ ಸಂಜೆ 5.40 ಗಂಟೆಗೆ ಅವರ ಸ್ಕೂಟರ್ ಮಂಗಳೂರಿನ ಕಾವೂರು ಜಂಕ್ಷನ್ ಪ್ರದೇಶದಲ್ಲಿ ಸುತ್ತಾಡಿದೆ. ಆ ಕಾರಣಕ್ಕಾಗಿ ಜೋಸ್ಸಿ ಅವರು ಸ್ಕೂಟರ್ ನಂಬರ್ ನೋಟ್ ಮಾಡಿ ಪೋಲೀಸರು ಜೋಸ್ಸಿ ಡಿಸೋಜಾ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

    ಅಗಸ್ಟ್ 5 ಶನಿವಾರ ನೋಟೀಸ್ ಜೋಸ್ಸಿ ಡಿಸೋಜಾ ಅವರ ಕೈಗೆ ಸಿಕ್ಕಿದ್ದು, ಈ ನೋಟೀಸ್ ನೋಡಿ ಜೋಸ್ಸಿ ಅವರು ತಬ್ಬಿಬ್ಬಾಗಿದ್ದಾರೆ. ಮನೆಯ ಹಸುವಿನಿಂದ ಕರೆದ ಹಾಲು ಹಾಗೂ ತಾನು ಸಾಕಿದ ಹಂದಿಗೆ ಆಹಾರವನ್ನು ಸಾಗಿಸಲು ಲೊರೆಟ್ಟೋಪದವು ಸುತ್ತಮುತ್ತ ಮಾತ್ರ ತಿರುಗಾಡುತ್ತಿದ್ದ ತನ್ನ ಸ್ಕೂಟರ್ ಮನೆ ಬಿಟ್ಟು ಮಂಗಳೂರಿನಗೆ ಹೇಗೆ ಹೋಯಿತು ಎನ್ನುವ ಗೊಂದಲ ಅವರದ್ದಾಗಿದೆ. ಮನೆಯಲ್ಲಿರುವವರು ಯಾರಾದರೂ ಜೋಸ್ಸಿ ಅವರಿಗೆ ಗೊತ್ತಾಗದಂತೆ ಸ್ಕೂಟರ್ ಕೊಂಡೊಯ್ದಿರಬಹುದೇ ಎನ್ನುವ ಸಂಶಯ ವ್ಯಕ್ತವಾಗುವುದು ಸಹಜವಾದರೂ, ಜೋಸ್ಸಿ ಯವರ ಇಬ್ಬರು ಮಕ್ಕಳು ಸಣ್ಣ ಪ್ರಾಯದವರಾಗಿದ್ದು, ಇನ್ನು ಪತ್ನಿಗಂತು ಸ್ಕೂಟರ್ ರೈಡ್ ಮಾಡಲು ಗೊತ್ತಿಲ್ಲ. ಹೀಗಿದ್ದೂ ಪೋಲೀಸರು ಜೋಸ್ಸಿ ಸ್ಕೂಟರ್ ನ ಮೇಲೆ ಹೆಲ್ಮೆಟ್ ಇಲ್ಲದೆ ಚಾಲನೆ, ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಹಾಗೂ ಟ್ರಾಫಿಕ್ ಸಿಗ್ನಲ್ ಜಂಪ್ ಸೇರಿದಂತೆ ಮೂರು ನೋಟೀಸ್ ಜಾರಿ ಮಾಡಿದ್ದಾರೆ.

    ಜೋಸ್ಸಿ ಡಿಸೋಜಾ ತನ್ನ ಸ್ಕೂಟರ್ ನಲ್ಲಿ ಯಾವತ್ತೂ ಮಂಗಳೂರು ಕಡೆಗೆ ಹೋದವರಲ್ಲ. ಆದರೂ ಇದೀಗ ಮಂಗಳೂರು ಟ್ರಾಫಿಕ್ ಪೋಲೀಸರು ಜೋಸ್ಸಿ ಮನೆಗೆ ನೋಟೀಸ್ ಕಳುಹಿಸಿರುವುದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಜೋಸ್ಸಿ ಸ್ಕೂಟರ್ ನಂಬರಿನಂತೆಯೇ ಇನ್ನೊಂದು ಸ್ಕೂಟರ್ ಮಂಗಳೂರಿನಲ್ಲಿ ಸಂಚರಿಸುತ್ತಿದೆಯೋ, ಕುಕೃತ್ಯಗಳನ್ನು ಎಸಗಲು ಕಿಡಿಗೇಡಿಗಳು ಬೇರೆಯವರ ನಂಬರ್ ಬಳಸಿ ವಾಹನಗಳನ್ನು ಚಲಾಯಿಸುತ್ತಿದ್ದಾರೋ ಎನ್ನುವ ಆತಂಕವೂ ಇದೀಗ ಎದುರಾಗಿದೆ.
    ಟ್ರಾಫಿಕ್ ಪೋಲೀಸರಿಂದಲೇ ನಡೆಯಿದೇ ಆಚಾತುರ್ಯ ?..


    ಮಂಗಳೂರು ಪೋಲೀಸ್ ಕಮಿಷನರೇಟ್ ನಲ್ಲಿರುವ ಪ್ರತಿ ಟ್ರಾಫಿಕ್ ಸಬ್ ಇನ್ಸಪೆಕ್ಟರ್ ಗಳಿಗೆ ದಿನಕ್ಕೆ ಕನಿಷ್ಟ ಪಕ್ಷ 50 ವಾಹನಗಳ ಮೇಲೆ ಕೇಸುಗಳನ್ನು ಹಾಕಬೇಕೆಂಬ ಕಟ್ಟಾಜ್ಞೆ ಪೋಲೀಸ್ ಇಲಾಖೆಯಿಂದ ಬಂದಿದೆ ಎನ್ನುವ ಮಾಹಿತಿ ಪೋಲೀಸ್ ಮೂಲಗಳಿಂದು ತಿಳಿದುಬಂದಿದ್ದು, ಬಂಟ್ವಾಳದ ಜೋಸ್ಸಿ ಐವನ್ ಡಿಸೋಜಾರ ಸ್ಕೂಟರ್ ಕೂಡಾ ಇದೇ ಕಟ್ಟಾಜ್ಞೆಯ ಬಲಿಪಶುವೇ ಎನ್ನುವ ಅನುಮಾನಗಳೂ ಕಾಡತೊಡಗಿದೆ.

    ದಿನಕ್ಕೆ 50 ಕೇಸುಗಳನ್ನು ಹಾಕಬೇಕೆಂದ ಕಾರಣಕ್ಕೆ ಪೋಲೀಸರು ಇದ್ದದ್ದಕ್ಕೆ, ಇಲ್ಲದ್ದಕ್ಕೆ ಎಲ್ಲದಕ್ಕೂ ಕೇಸುಗಳನ್ನು ಜಡಿಯುತ್ತಿದ್ದು, ತಮ್ಮ ಹೊರೆಯನ್ನು ಇನ್ನೊಬ್ಬರ ಬಡಪಾಯಿ ವಾಹನ ಮಾಲಕರ ಮೇಲೆ ಹೇರುತ್ತಿದ್ದಾರೋ ಎನ್ನುವ ಆತಂಕವೂ ಇದೀಗ ಜನರಲ್ಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply