DAKSHINA KANNADA
ಕರ್ತವ್ಯ ನಿರತ ಪ್ರೊಬೇಷನರಿ ಎಸ್ಐ ಮೇಲೆ ಹಲ್ಲೆ ಯತ್ನ

ಮಂಗಳೂರು ಅಗಸ್ಟ್ 7 : ಕರ್ತವ್ಯ ನಿರತ ಪ್ರೊಬೇಷನರಿ ಎಸ್ಐ ಮೇಲೆ ಹಲ್ಲೆ ಯತ್ನ ನಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ .ನಗರದ ಪಾಂಡೇಶ್ವರ ಠಾಣೆಯ ಪ್ರೊಬೇಷನರಿ ಎಸ್ಐ ರವಿ ಪವಾರ್ ಎಂಬವರು ಎಂದು ಸಂಜೆ ಜೆಪ್ಪು ವಿನ ಮಹಾಕಾಳಿ ಪಡ್ಪು ಎಂಬಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ .ಮಹಾಕಾಳಿ ಪಡ್ಪು ವಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಮ್ರಾನ್ ಎಂಬವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಇಮ್ರಾನ್ ಪ್ರೊಬೇಷನರಿ ಎಸ್ಐ ರವಿ ಪವಾರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ .ಈ ಹಿನ್ನೆಲೆಯಲ್ಲಿ ಇಮ್ರಾನ್ ಅವರನ್ನು ದಸ್ತಗಿರಿ ಮಾಡಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.