Connect with us

LATEST NEWS

ಉಡುಪಿಯ ಕೃಷ್ಣ ಸನ್ನಿಧಿಯಲ್ಲಿ ಅಷ್ಟಮಿ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಬರಹ

Share Information

ಉಡುಪಿ ಅಗಸ್ಟ್ 5 :– ಉಡುಪಿಯ ಕೃಷ್ಣ ಸನ್ನಿಧಿಯಲ್ಲಿ ಅಷ್ಟಮಿ ಬಹಳ ಪ್ರಸಿದ್ಧವಾದದ್ದು. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಾಡಿನ ಹಬ್ಬ. ಸಾಮಾನ್ಯವಾಗಿ ಶ್ರಾವಣ ಮಾಸದ ಅಷ್ಟಮಿಯನ್ನೇ ಕೃಷ್ಣಾಷ್ಟಮಿ ಎಂದು ಆಚರಿಸಲಾಗುತ್ತದೆ. ಆದರೆ ಉಡುಪಿಯ ಕೃಷ್ಣ ಮಠದಲ್ಲಿ ಸೌರಮಾನ ರೀತ್ಯಾ ಸಸಿಂಹ ಮಾಸದ ಅಷ್ಟಮಿಯಂದೇ ಕೃಷ್ಣ ಜಯಂತಿಯನ್ನು ಆಚರಿಸುವ ಪದ್ಧತಿ ಇದೆ. ಈ ಕಾರಣದಿಂದ ನಾಡಿನೆಲ್ಲೆಡೆ ಇದೇ ತಿಂಗಳ 15 ರಂದು ಕೃಷ್ಠಾಷ್ಠಮಿಯನ್ನು ಆಚರಿಸಿದರೆ ಉಡುಪಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಷ್ಠಮಿಯನ್ನು ಆಚರಿಸುತ್ತಾರೆ. ಈ ವಿಚಾರವಾಗಿ ಸಾರ್ವಜನಿಕರೊಬ್ಬರು ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಬರೆದಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.

ಜೂನ್ 23ರಂದು ಕುಂದಾಪುರದ ಕೋಟೇಶ್ವರದ ಡಾ. ಸಂಪತ್ ಕುಮಾರ್ ಎಂಬವರು ತಮ್ಮ ಫೇಸ್ ಬುಕ್  ನಲ್ಲಿ ಮಠದಲ್ಲಿ 2 ಬಾರಿ ಅಷ್ಟಮಿ ಆಚರಿಸಲಾಗುತ್ತಿದ್ದು ಪಾಖಂಡಿಗಳ ಕೆಲಸ. ಮಠದವರು ಹಣಕ್ಕೋಸ್ಕರ ಇದನ್ನು ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಇದಕ್ಕೆ ಇನ್ನಿತರ 3 ಜನ ಕಮೆಂಟ್ ಮಾಡಿದ್ದಾರೆ. ಸದ್ಯ ಮಠದವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ . ಆದ್ರೆ ಫೇಸ್ ಬುಕ್ ನಲ್ಲಿ  ಈ ರೀತಿ ಅವಹೇಳನಕಾರಿ ಯಾಗಿ ಪ್ರಕಟಿಸಿರುವುದನ್ನು ವಿರೋಧಿಸಿ ಮಠದ ಭಕ್ತರೊಬ್ಬರು ಪೋಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ ಉಡುಪಿ ನಗರ ಠಾಣೆಯಲ್ಲಿ ಸಂಪತ್ ಕುಮಾರ್ ಮತ್ತು ಅವರ ಹೇಳಿಕೆಯನ್ನು ಸಮರ್ತಿಸಿದ ಇನ್ನಿತರ ಮೂವರ ಮೇಲೂ  ಪ್ರಕರಣ ದಾಖಲಾಗಿದೆ.

ಉಡುಪಿಯ ಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಬಹಳ ಪ್ರಸಿದ್ಧಿ. ಲಕ್ಷಾಂತರ ಭಕ್ತರು ಈ ಹಬ್ಬದಲ್ಲಿ ಪಾಲ್ಗೊಳ್ತಾರೆ. ಆ ದಿನ ವೃತದಲ್ಲಿದ್ದು ರಾತ್ರಿ ಚಂದ್ರೋದಯದ ಬಳಿಕ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುತ್ತಾರೆ. ಕೃಷ್ಣ ಮಠದಲ್ಲಿ ನಡೆಯುವ ಪ್ರತಿ ಪರ್ವಗಳಿಗೂ ಒಂದು ಸಿದ್ದಾಂತವಿದೆ. ನಿಯಮಗಳಿವೆ. ಕೃಷ್ಣನನ್ನು ಪ್ರತಿಷ್ಟಾಪಿಸಿದ ಮಧ್ವರು ಈ ಬಗ್ಗೆ ತಮ್ಮ ಗ್ರಂಥದಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದ ಉಡುಪಿಯಲ್ಲಿ ಅಷ್ಟಮಿ ಆಚರಣೆಯನ್ನು ಇಂತಹ ದಿನವೇ ಮಾಡಬೇಕೆಂದು ತಿಳಿಸಿದ್ದಾರೆ. ಚಾಂದ್ರಮಾನ ಪದ್ದತಿಯ ಶ್ರಾವಣ ಮಾಸದಲ್ಲಿ ಬರುವ ಅಷ್ಟಮಿಯ ಪ್ರಕಾರ ಇದೇ ತಿಂಗಳ 15 ರಂದು ಷಟಮಿಯನ್ನು ಆಚರಿಸುತ್ತಾರೆ. ಆದರೆ ಕೃಷ್ಣ ಮಠದ ಪದ್ಧತಿಯಂತೆ ಸೌರಮಾನ ಸಿಂಹಮಾಸ ರೋಹಿಣಿ ನಕ್ಷತ್ರ  ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಕಾರಣದಿಂದ  ಉಡುಪಿಯಲ್ಲಿ  ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ  ಆಚರಿಸಲಾಗುತ್ತದೆ. ಆದ್ರೆ ಸದ್ಯ ಇದೇ ವಿಷಯ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರೊಬ್ಬರು ಈ ವಿಚಾರವಾಗಿ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಮಠದ ನಿಯಮವನ್ನು ಅವಹೇಳನಾಕಾರಿಯಾಗಿ ಬರೆದಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ತಮಗಿಷ್ಟ ಬಂದಂತೆ  ಒಂದು ಧರ್ಮದ ವಿರುದ್ಧ ಸಮಾಜದ ವಿರುದ್ಧ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ  ಅನೇಕ ಚರ್ಚೆಗಳು  ನಡೆದು ಸಮಾಜದ ಸ್ವಾಸ್ಥ್ಯಕ್ಕೂ ಕಾರಣವಾಗಿದೆ.   ಬಗ್ಗೆ ಸರಿಯಾದ ನಿಯಮಗಳು ಜಾರಿಗೆ ಬರದಿದ್ದಲ್ಲಿ ಇನ್ನಷ್ಟು ಅನಾಹುತಗಳಿಗೆ ದಾರಿ ಮಾಡಿಕೊಡಲಿದೆ. ಸದ್ಯ ಕೃಷ್ಣ ಮಠದಲ್ಲಿ  ಅಲ್ಲಿನ ಸಂಪ್ರದಾಯದಂತೆ ಅಷ್ಟಮಿ ನಡೆಯಲಿದೆ.


Share Information
Advertisement
Click to comment

You must be logged in to post a comment Login

Leave a Reply