ಮಂಗಳೂರು ಅಗಸ್ಟ್ 24 : ಜಿಯೋ ಸಿಮ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಮೊಬೈಲ್ ನೆಟ್ ವರ್ಕಿಂಗ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ ರಿಲಯನ್ಸ್ ಕಂಪನಿಯ ಜಿಯೋ 4ಜಿ ಮೊಬೈಲ್ ಬುಕ್ಕಿಂಗ್ ಇಂದಿನಿಂದ ಶುರುವಾಗಲಿದೆ.

ಇಂದು ಸಂಜೆ 5.30 ರಿಂದ ಆನ್’ಲೈನ್ ಬುಕಿಂಗ್ ಶುರುವಾಗಲಿದ್ದು ಫೋನ್ ಕೊಳ್ಳಲು ಆಸಕ್ತಿಯಿದ್ದವರು ಜಿಯೋ ವೆಬ್’ಸೈಟ್’ನಲ್ಲಿ ನೊಂದಣಿಯಾಗಬೇಕು. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಫ್ರೀ 4ಜಿ ಮೊಬೈಲ್ ಪೋನ್.

ಜಿಯೋ 4ಜಿ ಮೊಬೈಲ್ ಬುಕ್ಕಿಂಗ್ ಅನ್ನು ಆನ್ ಲೈನ್ ಜಿಯೋ ವೆಬ್ ಸೈಟ್, ಅಥವಾ ಮೊಬೈಲ್ ನಲ್ಲಿ ಮೈ ಜಿಯೋ APP , ಹಾಗೂ ರಿಲಯನ್ಸ್ ನ ಜಿಯೋ ಸೆಂಟರ್ ಗಳಲ್ಲಿ ಬುಕಿಂಗ್ ಮಾಡಬಹುದಾಗಿದೆ. ಬುಕಿಂಗ್ ಸಮಯದಲ್ಲಿ 500 ರೂಪಾಯಿ ಪಾವತಿಸಿ ಮತ್ತೆ ಉಳಿದ 1000 ರೂಪಾಯಿಯನ್ನು ಪೋನ್ ಡೆಲಿವರಿ ಸಮಯದಲ್ಲಿ ನೀಡಬಹುದಾಗಿದೆ.

ಜಿಯೋ ಮೊಬೈಲ್ ಸಂಪೂರ್ಣ ಫ್ರೀ ಯಾಗಿದ್ದು, ಮೊಬೈಲ್ ಕೊಳ್ಳುವಾಗ 1500 ರೂಪಾಯಿ ಯನ್ನು ನೀಡಬೇಕಾಗಿದ್ದು , ನಂತರ ದಿನಗಳಲ್ಲಿ ಮೊಬೈಲ್ ಹಿಂದಿರುಗಿಸಿದರೆ ಹಣವನ್ನು ವಾಪಾಸ್ ನೀಡಲಾಗುವುದೆಂದು ಕಂಪೆನಿ ತಿಳಿಸಿದೆ.