LATEST NEWS
ಅಭೂತಪೂರ್ವ ಸ್ಪಂದನೆ ಬಿಜೆಪಿ ಜಯ ಸಾಧಿಸುವುದು ನಿಚ್ಚಳವಾಗಿದೆ : ಡಿ.ವೇದವ್ಯಾಸ್ ಕಾಮತ್

ಅಭೂತಪೂರ್ವ ಸ್ಪಂದನೆ ಬಿಜೆಪಿ ಜಯ ಸಾಧಿಸುವುದು ನಿಚ್ಚಳವಾಗಿದೆ : ಡಿ.ವೇದವ್ಯಾಸ್ ಕಾಮತ್
ಮಂಗಳೂರು ಎಪ್ರಿಲ್ 30: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಬೋಳಾರದ ವಾರ್ಡ್ ನಂ 58 ಹಾಗೂ ವೆಲೆನ್ಸಿಯಾ ವಾರ್ಡ್ ನಂ 48 ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕ್ಷೇತ್ರದ ಮತದಾರರು ಈ ಬಾರಿ ತೋರಿಸುತ್ತಿರುವ ಅಭೂತಪೂರ್ವ ಸ್ಪಂದನೆ, ಕಾರ್ಯಕರ್ತರ ಉತ್ಸಾಹ ನೋಡಿದರೆ ಭಾರತೀಯ ಜನತಾ ಪಾರ್ಟಿಯು ಭಾರೀ ಬಹುಮತದಿಂದ ಸುಲಭ ಜಯ ಸಾಧಿಸುವುದು ನಿಚ್ಚಳವಾಗಿದೆ ಎಂದು ವೇದವ್ಯಾಸ್ ಕಾಮತ್ ಹೇಳಿದರು.
