BELTHANGADI
ಮೃತ್ಯುವಿಗೆ ಆಹ್ವಾನ ನೀಡುವ ರಸ್ತೆ, ಕಣ್ಣು ಮುಚ್ಚಿ ಕುಳಿತಿದೆ ಜಿ.ಪಂ.
ಬೆಳ್ತಂಗಡಿ, ಆಗಸ್ಟ್ 31 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮದ ಸುರ್ಯ ಎಂಬಲ್ಲಿ ತೆಕ್ಕಾರು , ಬಾಜಾರು ಉಪ್ಪಿನಂಗಡಿ ರಸ್ತೆಗೆ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆ ಆಗಿದೆ.ಪ್ರತಿ ಮಳೆಗಾಲದ ದಿನಗಳಲ್ಲಿ ಇಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಗುಡ್ಡ ಕುಸಿದು ಮಣ್ಣು ಮುಖ್ಯ ರಸ್ತೆ ಗೆ ಮಣ್ಣು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತಿದ್ದರೂ, ಜಿಲ್ಲಾ ಪಂಚಾಯಿತಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಜಿಲ್ಲಾ ಪಂಚಾಯತ್ ಇಂಜೀನಿಯರಿಂಗ್ ವಿಭಾಗದ ಮುಖ್ಯಸ್ಥ ರು ಕಂಡು ಕಂಡರಿಯದಂತೆ ಇರುವುದು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಆಕ್ರೋಶ ತಂದಿದೆ . ಈಗ ಇಲ್ಲಿ ಇನ್ನೊಂದು ಅಪಾಯ ಎದುರಾಗಿದೆ . ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ಬುಡಕ್ಕೆ’ಮಣ್ಣು ಬಿದ್ದು ಬಿದ್ದು ಕಂಬ ವಾಲಿದ್ದು ಬಿಳುವ ‘ಅಂಚಿನಲ್ಲಿದೆ. ಈ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಸಂಚಾರಿಸುತಿವೆ . ಶಾಲಾ ಮಕ್ಕಳು, ಗ್ರಾಮಸ್ಥರು ಓಡಾಟ ಮಾಡುತ್ತಿರುತ್ತಾರೆ. ಆದ್ದರಿಂದ ಅಪಾಯ ನಿಶ್ಚಿತವಾಗಿದೆ. ದುರ್ಘಟನೆ ಸಂಭವಿಸುವ ಮುನ್ನ ಎಚ್ಚೆತು ಕೊಂಡಲ್ಲಿ ‘ಗಂಡಾತರ ತಪ್ಪಿಸಬಹುದು . ಇಲ್ಲವಾದಲ್ಲಿ ಕಂಬ ಬಿದ್ದು ಅನೇಕ ಜೀವಗಳು ಕಳಕೊಳ್ಳುವ ಅಪಾಯ ಕಟ್ಟಿಟ್ಟ ಬುತ್ತಿ.