LATEST NEWS
ಮುಖ್ಯಮಂತ್ರಿ ವಿರುದ್ದ ಯಡಿಯೂರಪ್ಪ ಹೇಳಿಕೆ – ಜಿಲ್ಲಾ ಕಾಂಗ್ರೇಸ್ ಖಂಡನೆ
ಮುಖ್ಯಮಂತ್ರಿ ವಿರುದ್ದ ಯಡಿಯೂರಪ್ಪ ಹೇಳಿಕೆ – ಜಿಲ್ಲಾ ಕಾಂಗ್ರೇಸ್ ಖಂಡನೆ
ಮಂಗಳೂರು ನವೆಂಬರ್ 10: ಬಿಜೆಪಿಯ ಪರಿವರ್ತನಾ ಯಾತ್ರೆ ವಿಫಲವಾಗಿದ್ದಕ್ಕೆ ಯಡಿಯೂರಪ್ಪ ಮಾನಸಿಕವಾಗಿ ಏನೇನೋ ಹೇಳುತ್ತಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆಗೆ ಜನ ಸೇರುವುದೂ ಕಡಿಮೆಯಾಗಿದೆ. ಈಗ ಸೀರೆ ಕೊಟ್ಟರೂ ಜನ ಸೇರುವುದು ಕೂಡಾ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬುದ್ದಿವಂತರ ಜಿಲ್ಲೆಗೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ವಿರುದ್ದ ಕೀಳಾಗಿ ಮಾತನಾಡಿದ್ದಾರೆ, ಸಿದ್ಧರಾಮಯ್ಯನವರು ಜನಪ್ರಿಯ ಮುಖ್ಯಮಂತ್ರಿಯಾಗಿದ್ದು, ನೀಡಿದ ಭರವಸೆಗಳನ್ನು ಸರಕಾರ ಈಡೇರಿಸಿದ್ದು, ಹಲವು ಸಾಲ ಮನ್ನಾ ಮಾಡಿದೆ ಎಂದರು.
ಜೈಲಿಗೆ ಹೋದ ವ್ಯಕ್ತಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಜಿಲ್ಲೆಯ ಜನತೆಗೆ ಯಾರು ಮೂರ್ಖನೆಂದು ತಿಳಿದಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಕೀಳಾಗಿ ಮಾತನಾಡಿದ್ದನ್ನು ಜಿಲ್ಲಾ ಕಾಂಗ್ರೇಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.