DAKSHINA KANNADA
ಮಂಗಳೂರಿಗರು ಚೂರಿಯಿಂದ ಇರಿಯುವವರು-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ವಿವಾದಾತ್ಮಕ ಹೇಳಿಕೆ
ಮಂಗಳೂರಿಗರು ಚೂರಿಯಿಂದ ಇರಿಯುವವರು-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ವಿವಾದಾತ್ಮಕ ಹೇಳಿಕೆ
ಪುತ್ತೂರು, ಫೆಬ್ರವರಿ 26: ಉತ್ತರ ಕರ್ನಾಟಕ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸಿದರೆ, ಮಂಗಳೂರಿನ ಜನ ಬೀದಿಯಲ್ಲೇ ಚೂರಿ ಇರಿಯುತ್ತಾರೆ ಎನ್ನುವ ದಕ್ಷಿಣಕನ್ನಡ ಜಿಲ್ಲೆಯ ಜನ ಮುಜುಗರ ಪಡುವ ವಿವಾದಾತ್ಮಕ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ನೀಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಫೆಬ್ರವರಿ 20 ರಂದು ಸುಳ್ಯದಲ್ಲಿ ನಡೆದ ಅಕ್ಷತಾ ಎನ್ನುವ ವಿದ್ಯಾರ್ಥಿನಿಯ ಕೊಲೆಯ ವಿಚಾರದ ಕುರಿತು ಮಾಹಿತಿ ನೀಡುತ್ತಿದ್ದ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಮಂಗಳೂರು ಭಾಗದ ಜನ ಸೌಮ್ಯತೆಗೆ, ಸೌಜನ್ಯತೆಗೆ ಬೆಲೆ ಕೊಡುವ ಜನ ಎಂದು ಭಾವಿಸಲಾಗಿದೆ.
ಅದೇ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಬಡತನವಿದೆ, ನೋವಿದೆ, ಹಸಿವಿದೆ. ಅಲ್ಲಿಯ ಜನ ಬೀದಿಗಿಳಿದು ಜಗಳವಾಡುತ್ತಾರೆ. ಆದರೆ ಆ ಸ್ವಭಾವವನ್ನು ಮಂಗಳೂರಿನಲ್ಲಿ ನೋಡಲು ಸಾಧ್ಯವಿಲ್ಲ. ಮಂಗಳೂರಿನ ಜನ ಚಾಕುವಿನಿಂದ ಚುಚ್ಚುವವರು ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು ನಡೆಸುವಂತಹ ಕೃತ್ಯಗಳಿಗೆ ಇಡೀ ಜಿಲ್ಲೆಯ ಜನರನ್ನು ಹೊಣೆಯಾಗಿಸುವಂತಹ ಹಾಗೂ ಜಿಲ್ಲೆಯ ಎಲ್ಲಾ ಜನರನ್ನು ಕೊಲೆಗಾರರು ಎನ್ನುವಂತೆ ಬಿಂಬಿಸುವ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.