Connect with us

    DAKSHINA KANNADA

    ಪಶ್ಚಿಮ ವಲಯ ನೂತನ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ

    ಮಂಗಳೂರು, ಆಗಸ್ಟ್ 16 : ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಇಂದು ಅಧಿಕಾರ ಸ್ವೀಕಾರಿಸಿದ್ದಾರೆ. ನಿರ್ಗಮಿತ ಐಜಿಪಿ ಹರಿಶೇಖರನ್ ಅವರಿಂದ ಹೇಮಂತ್ ನಿಂಬಾಳ್ಕರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿಂಬಾಳ್ಕರ್ ಅವರು ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ದ ಕಠಿಣ ಕ್ರಮದ ಕೈಗೊಳ್ಳಲಾಗುವುದು ಎಂದ ಅವರು ಜನಸಾಮಾನ್ಯರ ನೆಮ್ಮದಿಗೆ ಭಂಗ ತರುವವರ ವಿರುದ್ದ ನಿರ್ದಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಅನೇಕ ಸೂಕ್ಷ್ಮ ಹಾಗೂ ಗಂಭೀರ ಸಮಸ್ಯೆಗಳಿರುವ ಈ ಪಶ್ಚಿಮ ವಲಯದಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಚಾಲೇಂಜಿಗ್ ಕೆಲಸವಾಗಿದೆ ಎಂದ ಅವರು ಇದನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿರುವುದು ಮಾದ್ಯಮಗಳ ವರದಿಯಿಂದ ಗೊತ್ತಾಗಿದೆ.ಈ ಪ್ರಕರಣ ಕುರಿತು ಹಾಗೂ ಉಳಿದ ಆರೋಪಿಗಳ ಬಂಧನ ಕುರಿತಂತೆ ಎಸ್ ಪಿ ಸುಧೀರ್ ರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.
     ನೂತನ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರು 1998 ನೇ ಐಪಿಎಸ್ ಬ್ಯಾಚಿನವರಾಗಿದ್ದು, 1999-2000 ನೇ ಇಸವಿಯಲ್ಲಿ ಅಂದಿನ ಎಸ್ ಪಿ ಆಗಿದ್ದ ಕಮಲ್ ಪಂತ್ ಅವರ ಕಾಲದಲ್ಲಿ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೊಬೆಷನರಿ ಎಸ್ ಪಿ ಆಗಿ ಕರ್ತವ್ಯ ಆರಂಭಿಸಿದ್ದರು. ಆನಂತರ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಅವರು ಬೆಂಗಳೂರಿನಲ್ಲಿ ಜಂಟಿ ಆಯುಕ್ತರಾಗಿ, ಹೆಚ್ಚುವರಿ ಆಯುಕ್ತರಾಗಿ ಸೇವೆಸಲ್ಲಿಸಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಿ ಐ ಡಿ ತನಿಖೆಯ ನೇತ್ರತ್ವವನ್ನು ವಹಿಸಿದ್ದರು. 2009 ರಲ್ಲಿಜಸ್ಟಿಸ್ ಸಂತೋಷ್ ಹೆಗ್ಡೆ ಲೋಕಯುಕ್ತರಾಗಿದ್ದ ಸಂದರ್ಭದಲ್ಲಿ 250 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆಯ ವಿಚಾರದ ಆರೋಪ ಕೂಡ ಇವರ ಮೇಲಿದ್ದು ಅದು ತನಿಖೆಯ ಹಂತದಲ್ಲಿದೆ.ಇತ್ತಿಚೆಗೆ ಪತ್ರಕರ್ತ ಅಗ್ನಿ ಶ್ರೀಧರ್ ಮನೆಗೆ ದಾಳಿ ನಡೆಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಡಾ. ಅಂಜಲಿ ನಿಂಬಾಳ್ಕರ್ 2013 ನೇ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಸುದ್ದಿಯಾಗಿದ್ದರು.

    ಪಶ್ಚಿಮ ವಲಯದ ನಿರ್ಗಮಿತ  ಐಜಿಪಿಯಾಗಿದ್ದ ಹರಿಶೇಖರನ್ ಕೇವಲ ಏಳು ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ, ಎಸ್ ಡಿ ಪಿ ಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣಗಳು ಮತ್ತು ಜಿಲ್ಲೆಯಲ್ಲಿ ಇತ್ತಿಚೆಗೆ ನಡೆದ ಅಹಿತಕರ ಘಟನೆ ಮತ್ತು ಆನಂತರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರು ಏಳು ತಿಂಗಳಲ್ಲೇ ವರ್ಗಾವಣೆಗೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *