DAKSHINA KANNADA
ನೆಲ್ಯಾಡಿಯಲ್ಲಿ ಗುಪ್ತವಾಗಿ ನಡೆದ ಶಾದಿ ಜಿಹಾದ್…
ನೆಲ್ಯಾಡಿಯಲ್ಲಿ ಗುಪ್ತವಾಗಿ ನಡೆದ ಶಾದಿ ಜಿಹಾದ್…
ಪುತ್ತೂರು, ನವಂಬರ್ 18: ಲವ್ ಜಿಹಾದ್ ಎನ್ನುವ ಪದ ಕೇಳದವರು ಇತ್ತೀಚಿನ ದಿನಗಳಲ್ಲಿರುವುದು ಸಾಧ್ಯವೇ ಇಲ್ಲ. ಆದರೆ ಇದೀಗ ಲವ್ ಜಿಹಾದ್ ಜೊತೆಯಲ್ಲಿ ಶಾದಿ ಜಿಹಾದ್ ಎನ್ನುವ ಹೊಸ ವಿಚಾರವೂ ಹರಿದಾಡಲು ಪ್ರಾರಂಭವಾಗಿದೆ.
ಹೌದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಎಂಬಲ್ಲಿ ಇದೀಗ ಶಾದಿ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೂಲತ ಪುತ್ತೂರು ತಾಲೂಕಿನ ಕಡಬ ಸಮೀಪದ ನೂಜಿಬಾಲ್ತಿಲದ ಪಾಲೆಮಜಲು ನಿವಾಸಿ ಹಾಗೂ ಪ್ರಸ್ತುತ ನೆಲ್ಯಾಡಿಯಲ್ಲಿ ನೆಲೆಸಿರುವ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಮೂಲಕ ಪ್ರಚಾರದಲ್ಲಿದ್ದಾರೆ.
ಕೇರಳದ ನಾಯರ್ ಸಮುದಾಯಕ್ಕೆ ಸೇರಿದ ನವೀನ್ ಬಾಬು ಎನ್ನುವ 20 ವರ್ಷದ ಯುವಕನಿಗೆ ಮುಸ್ಲಿಂ ಯುವತಿಯೊಂದಿಗೆ ಪ್ರೇಮಾಂಕುರವಾಗಿದೆ. ಬಳಿಕ ಪ್ರೇಮ ವಿವಾಹದ ಘಟ್ಟಕ್ಕೆ ತಲುಪಿದ್ದು, ಯುವತಿಯನ್ನು ವಿವಾಹವಾಗಬೇಕಾದರೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕೆಂಬ ಆಫರ್ ಕೂಡಾ ನವೀನ್ ಬಾಬು ಮುಂದಿತ್ತು.
ಈ ಆಫರ್ ಅನ್ನು ಒಪ್ಪಿಕೊಂಡಿರುವ ನವೀನ್ ಬಾಬು ಇದೀಗ ನವಾಜ್ ಆಗಿ ಮರು ನಾಮಕರಣ ಹೊಂದಿ ನವಾಜ್ ಆಗಿ ಧರ್ಮಾಂತರವಾಗಿದ್ದಾನೆ. ಈ ಸಂಬಂಧ ಕೇರಳದ ಕ್ಯಾಲಿಕಟ್ ನಲ್ಲಿರುವ ತೆರಿಬಿಯಾತ್ಯುಲ್ ಇಸ್ಲಾಂ ಸಭಾದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ಸರ್ಟಿಫಿಕೇಟನ್ ಪಡೆದುಕೊಂಡಿದ್ದಾನೆ.
ಸೆಪ್ಟಂಬರ್ 14,2017 ರಂದು ಕ್ಯಾಲಿಕೆಟ್ ನ ತೆರಿಬಿಯಾತ್ಯುಲ್ ಇಸ್ಲಾಂ ಸಭಾಕ್ಕೆ ಇಸ್ಲಾಂ ಧರ್ಮದ ದೀಕ್ಷೆಯನ್ನು ಪಡೆದಿರುವ ನವೀನ್ ನವಂಬರ್ 15, 2017 ರಂದು ಇಸ್ಲಾಂ ಧರ್ಮಕ್ಕೆ ಸೇರಿದ ಅಧಿಕೃತ ಸರ್ಟಿಫಿಕೇಟ್ ಹಿಡಿದುಕೊಂಡು ಸೀದಾ ನೆಲ್ಯಾಡಿಗೆ ಬಂದಿದ್ದಾನೆ. ಪ್ರಸ್ತುತ ನೆಲ್ಯಾಡಿಯಲ್ಲಿ ಪಿಕ್ ಅಪ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ನವೀನ್ ಪೋಷಕರಾದ ಬಾಬು ಹಾಗೂ ಸುನಿತಾ ದಂಪತಿಗಳಿಗೆ ಮಗ ಇಸ್ಲಾಂ ಗೆ ಮತಾಂತರವಾದ ವಿಚಾರ ತಿಳಿದಿದ್ದರೂ, ಮಗನ ನಿರ್ಧಾರವನ್ನು ವಿರೋಧಿಸಲಾಗದೆ ಒಲ್ಲದ ಮನಸ್ಸಿನಿಂದ ಈ ಮತಾಂತರವನ್ನು ಸಹಿಸಿಕೊಂಡಿದ್ದಾರೆ. ಅತ್ಯಂತ ಗುಪ್ತವಾಗಿ ಈ ಮತಾಂತರ ಕಾರ್ಯಾಚರಣೆಯು ನಡೆದಿದ್ದು, ನವೀನ್ ಮನೆ ಪಕ್ಕದವರಿಗೂ ಈ ವಿಚಾರ ತಿಳಿಯದಂತೆ ಗೌಪ್ಯವನ್ನೂ ಕಾಪಾಡಲಾಗಿದೆ.
ಲವ್ ಜಿಹಾದ್ ಮೂಲಕ ಮತಾಂತರ ಎನ್ನುವ ವಿಚಾರ ಇದೀಗ ಅತ್ಯಂತ ಚರ್ಚೆಯಲ್ಲಿರುವ ಈ ಸಂದರ್ಭದಲ್ಲಿ ಇದೀಗ ಶಾದಿ ಜಿಹಾದ್ ಮೂಲಕವೂ ಮತಾಂತರವಾಗುತ್ತದೆ ಎನ್ನುವ ವಿಚಾರ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಜನರ ಕುತೂಹಲಕ್ಕೂ ಕಾರಣವಾಗಿದೆ.