MANGALORE
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದರೋಡೆಗಾಗಿ ಸಂಚು ರೂಪಿಸುತ್ತಿದ್ದ ಆರೋಪಿಗಳ ಬಂಧನ
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದರೋಡೆಗಾಗಿ ಸಂಚು ರೂಪಿಸುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು ಫೆಬ್ರವರಿ 16: ಕೊಲೆ ಮಾಡಲು ಹಣದ ಅವಶ್ಯಕತೆಗಾಗಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗ್ರೆಯ ಭರತೇಶ್ ಎಂಬಾತ ತನ್ನ ಅಣ್ಣ ಶಿವರಾಜ್ ಕರ್ಕೇರನ ಕೊಲೆಗೆ ಪ್ರತಿಕಾರವಾಗಿ ಕೊಲೆ ಮಾಡಿ ಹೊರ ರಾಜ್ಯಕ್ಕೆ ಪರಾರಿಯಾಗಲು ಹಣದ ಅವಶ್ಯಕೆತಗಾಗಿ ದರೋಡೆ ಮಾಡಲು ಮಾರಕಾಯುಧ ಗಳನ್ನು ರಾಷ್ಚ್ರೀಯ ಹೆದ್ದಾರಿ 66 ಸಮೀಪ ಹೊಂಚು ಹಾಕುತ್ತಿದ್ದರು, ಸುಮಾರಿು 4 ರಿಂದ 5 ಮಂದಿ ಯುವಕರು ರಾಷ್ಟ್ರೀಯ ಹೆದ್ದಾರಿ 66 ರ ಕುದ್ರೆಮುಖ ಜಂಕ್ಷನ್ ಬಳಿ ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳು ಈ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದಾರೆ. ದಾಳಿ ಕೃತ್ಯಕ್ಕೆ ಉಪಯೋಗಿಸಲು ಇಟ್ಟುಕೊಂಡಿದ್ದ ಮಾರಕಾಸ್ತ್ರಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಪ್ರದೀಪ್ ಕುಮಾರ್, ಸುನೀಲ್ , ಚರಣ್ ಶೆಟ್ ಎಂದು ಗುರುತಿಸಲಾಗಿದೆ. ಭರತ್ ಮತ್ತು ನವೀನ್ ನಾಪತ್ತೆಯಾದ ಆರೋಪಿಗಳು.