LATEST NEWS
ಓಟಿಗಾಗಿ ಹಿಂದೂಗಳ ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ಒಪ್ಪಂದ ದುರದೃಷ್ಟಕರ ; ಸಾಧ್ವಿ ಬಾಲಿಕ ಸರಸ್ವತಿ
ಓಟಿಗಾಗಿ ಹಿಂದೂಗಳ ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ಒಪ್ಪಂದ ದುರದೃಷ್ಟಕರ ; ಸಾಧ್ವಿ ಬಾಲಿಕ ಸರಸ್ವತಿ
ಮಂಗಳೂರು, ಏಪ್ರಿಲ್ 27: ರಾಜ್ಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಎಸ್ ಡಿ ಪಿ ಐ ಪಕ್ಷ ದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ವಿರುದ್ಧ ಸಾಧ್ವಿ ಬಾಲಿಕಾ ಸರಸ್ವತಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ .
ಕಾಸರಗೋಡಿನ ಬದಿಯಡ್ಕದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ರಾಷ್ಟ್ರೀಯ ಪಕ್ಷವೊಂದು ಚುನಾವಣೆಗೋಸ್ಕರ ಒಪ್ಪಂದ ಮಾಡಿಕೊಂಡಿರುವುದು ದುರದೃಷ್ಟಕರ.
ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ಹಿಂದೂಗಳ ಸ್ಥಿತಿ ಏನಾಗಲಿದೆ ಎಂಬುದನ್ನು ಸೂಚಿಸುತ್ತದೆ ಎಂದರು.
ಗೋಶಾಲೆ ಹಾಗೂ ಮನೆಗಳ ಹಟ್ಟಿಯಿಂದ ಮಾರಕಾಸ್ತ್ರಗಳಿಂದ ಬೆದರಿಸಿ ಗೋವುಗಳನ್ನು ಅಪಹರಿಸಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಆತಂಕಕಾರಿ ಪರಿಸ್ಥಿತಿ ಎಂದು ಅವರು ಹೇಳಿದರು. ದೇಶದಲ್ಲಿ ಗೋವುಗಳು ಹಾಗೂ ಮಹಿಳೆಯರು ಸುರಕ್ಷಿತರಿಲ್ಲ ಎಂದು ಅವರು ಕಿಡಿಕಾರಿದರು.
ಲವ್ ಜಿಹಾದ್ ಭ್ರೂಣ ಹತ್ಯೆ ಸೇರಿದಂತೆ ಇನ್ನಿತರ ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ,
ಇದನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದ ಅವರು ದೇಶದಲ್ಲಿ ಗೋವುಗಳು ಸುರಕ್ಷಿತ ವಾಗಬೇಕಾದರೆ ಈ ಕೂಡಲೇ ದೇಶಾದ್ಯಂತ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣೆ ಹತ್ತಿರ ಬರುವಾಗ ಕೆಲವರಿಗೆ ಮಂದಿರ ದೇವಾಲಯಗಳ ನೆನಪಾಗುತ್ತದೆ.
ಚುನಾವಣೆ ಸಂದರ್ಭದಲ್ಲಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹಿಂದೂಗಳ ನೆನಪಾಗುತ್ತದೆ .
ತಮ್ಮ ಟೆಂಪಲ್ ರನ್ ಮುಂದುವರೆದರೆ ಅಯೋಧ್ಯೆ ಯಲ್ಲೂ ರಾಮಮಂದಿರವಿದೆ ಟೆಂಪಲ್ ರನ್ ಅಲ್ಲಿಗೂ ತಲುಪುವಂತಾಗಲಿ ಎಂದು ಅವರು ವ್ಯಂಗ್ಯ ವಾಡಿದರು.
ವಿಡಿಯೊಗಾಗಿ…