DAKSHINA KANNADA
ಐದು ದಿನದ ಮಗುವಿನೊಂದಿಗೆ ಹುತಾತ್ಮ ಪತಿಗೆ ವಿದಾಯ ಹೇಳಿದ ಸೈನಿಕ ಪತ್ನಿ
ಐದು ದಿನದ ಮಗುವಿನೊಂದಿಗೆ ಹುತಾತ್ಮ ಪತಿಗೆ ವಿದಾಯ ಹೇಳಿದ ಸೈನಿಕ ಪತ್ನಿ
ಮಂಗಳೂರು, ಫೆಬ್ರವರಿ 24: ಸೈನಿಕನ ಆತ್ಮಸ್ಥೈರ್ಯಕ್ಕೆ ಸೈನಿಕನೇ ಸಾಟಿ ಎನ್ನುವ ಸಂದೇಶವನ್ನು ಸೂಚಿಸುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫೆಬ್ರವರಿ 15 ರಂದು ಭಾರತೀಯ ವಾಯು ಸೇನೆಗೆ ಸೇರಿದಂತಹ ವಿಮಾನ ಅಸ್ಸಾಂ ನಲ್ಲಿ ಅಫಘಾತಕ್ಕೊಳಗಾಗಿತ್ತು.
ಎರಡು ಸೀಟುಗಳ ಸಾಮರ್ಥ್ಯದ ಈ ವಿಮಾನ ಅಸ್ಸಾಂ ನ ಜೋರ್ಹಟ್ ವಾಯುಸೇನಾ ನೆಲೆಯಿಂದ ಟೇಕ್ ಆಪ್ ಆಗಿತ್ತು.
ಬಳಿಕ ತಾಂತ್ರಿಕ ದೋಷದ ಕಾರಣದಿಂದಾಗಿ ಅಸ್ಸಾಂ ನ ಮಜುಲಿ ದ್ವೀಪದಲ್ಲಿ ಅಫಘಾತಕ್ಕೀಡಾಗಿತ್ತು.
ಈ ಅಫಘಾತದಿಂದಾಗಿ ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಜೈ ಪಾಯಸ್ ಸಿಂಗ್ ಮತ್ತು ವಿಂಗ್ ಕಮಾಂಡರ್ ಡಿ.ವಾಟ್ಸ್ ಹುತಾತ್ಮರಾಗಿದ್ದರು.
ಡಿ.ವಾಟ್ಸ್ ಅವರ ಅಂತ್ಯಕ್ರೀಯೆ ಇತ್ತೀಚೆಗೆ ನಡೆದಿದ್ದು, ಇವರ ಪತ್ನಿಯೂ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಜರ್ ಕುಮುದಾ ಡೋಗ್ರಾ ತನ್ನ ಪತಿ ಅಂತ್ಯಕ್ರೀಯೆಯಲ್ಲಿ ಸೇನೆಯ ಸಮವಸ್ತ್ರವನ್ನು ಧರಿಸಿ ತನ್ನ ಐದು ದಿನ ಪ್ರಾಯದ ಮಗಳನ್ನು ಕರೆದುಕೊಂಡು ಬರುತ್ತಿರುವುದು ಎಲ್ಲರ ಕರುಳು ಕಿತ್ತು ಬರುವಂತೆ ಮಾಡಿತ್ತು.
ಪತಿ ಹುತಾತ್ಮರಾಗಿದ್ದರೂ ಸೇನೆಯ ಮೇಲಿನ ಅಭಿಮಾನ ಹಾಗೂ ಸೈನಿಕನ ಆತ್ಮಸ್ಥೈರ್ಯದ ಕಿಚ್ಚನ್ನು ಹಚ್ಚುವ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಟ್ವಿಟ್ಟರ್ ಹಾಗೂ ಫೇಸ್ಬುಕ್ ನಲ್ಲಿ ಹರಿದಾಡುತ್ತಿದೆ.
ಸೈನಿಕನ ಆತ್ಮಸ್ಥೈರ್ಯವನ್ನು ತನ್ನ ಪತಿ ಹುತಾತ್ಮರಾದ ಸಂದರ್ಭದಲ್ಲೂ ಕುಗ್ಗಿಸದ ಈ ಹೆಣ್ಣು ಮಗಳಿಗೊಂದು ಸಲಾಮ್.