Connect with us

    LATEST NEWS

    ಉಡುಪಿಯ ಪುತ್ತೂರಿನಲ್ಲಿ ಹಾವುಗಳ ಸಮಾವೇಶ

    ಉಡುಪಿ, ಆಗಸ್ಟ್ 30: ಇದೊಂದು ಅಪರೂಪದ ದೃಶ್ಯಾವಳಿ. ಒಂದೊಮ್ಮೆ ಅಲ್ಲಿದ್ದವರು ಆಶ್ಚರ್ಯ ಚಕಿತರಾಗಿದ್ದರು ಒಂದಷ್ಟು ಹಾವುಗಳು ಒಂದೆಡೆ ಸೇರಿದ್ದವು. ಆದರೆ ಅಂದಾ ಹಾಗೇ ಇದು ಹಾವುಗಳ ಸಭೆಯಲ್ಲ. ಹಾವುಗಳ “ಮಿಲನಕ್ರಿಯೆ” ನಡೆಯುತ್ತಿರುವ ಅಪರೂಪದ ದೃಶ್ಯ. ಇದು ಕಂಡು ಬಂದದ್ದು ಉಡುಪಿಯ ಪುತ್ತೂರಿನಲ್ಲಿ. ಇದನ್ನು ಗಮನಿಸಿದ ಉರಗ ತಜ್ನ ಗುರುರಾಜ್ ಸನಿಲ್ ಸ್ಥಳೀಯರಿಗೆ ಮಾಹಿತಿ ನೀಡಿದರು. ಈ ಹಾವುಗಳನ್ನು ಸಾಮಾನ್ಯವಾಗಿ ಎಲ್ಲರೂ ಆಗಾಗ ಕಾಣುತ್ತಿರುತ್ತಾರೆ. ಕನ್ನಡದಲ್ಲಿ: ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಎಂದು ಕರೆಯುತ್ತಾರೆ. ಇಂಗ್ಲೀಷ್ ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಎನ್ನುತ್ತಾರೆ ವೈಜ್ಞಾನಿಕವಾಗಿ: ಆಂಫಿಯೆಸ್ಮ ಸ್ಟೊಲಾಟ ( amphiesma stolata) ಎಂದು ಗುರುತಿಸಲಾಗಿದೆ. ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ವಂಶೋತ್ಪತ್ತಿಕಾಲ. ಸೆಪ್ಟಂಬರ್ ತಿಂಗಳು ಅವುಗಳ ಮಿಲನಕಾಲವಾಗಿರುವುದರಿಂದ ಒಂದು ಹೆಣ್ಣಿನೊಂದಿಗೆ ಹಲವು ಗಂಡು ಹಾವುಗಳು ಕಂಡು ಬರುತ್ತವೆ. ” ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ್ಮ ಜೀವರಾಶಿಗಳ ವಂಶೋತ್ಪತ್ತಿ ಹತೋಟಿಯಲ್ಲಿರುತ್ತದೆ. ಆ ಮೂಲಕ ಮಾನವರಿಗೆ ಸೋಕುವ ಅನೇಕ ರೋಗಗಳಿಂದ ಈ ಹಾವುಗಳು ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ ” ಎನ್ನುತ್ತಾರೆ ಉರಗ ತಜ್ಞ ಗುರುರಾಜ್ ಸನಿಲ್.ಇವು ವಿಷರಹಿತ ಹಾವುಗಳು ಮತ್ತು ತುಂಬಾ ನಿರುಪದ್ರವಿಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಾಮಾನ್ಯವಾಗಿ ಹಸಿರು ಪ್ರದೇಶಗಳಾದ ತೋಟ, ಹೊಲಗದ್ದೆ ಮತ್ತು ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಒಂದು ವಿಶೇಷದ ಸಂಗತಿಯೆಂದರೆ, ಈ ಹಾವೊಂದು ಹಾನಿಗೊಂಡ ಅಥವಾ ಘಾಸಿಗೊಂಡ ತಕ್ಷಣ “ಫೆರೋಮೋನ್” ಎಂಬ ಒಂದು ಬಗೆಯ ವಾಸನಾ ದ್ರವ್ಯವನ್ನು ಸ್ರವಿಸುತ್ತದೆ. ಆಗ ಆ ವಾಸನೆಗೆ ಆಕರ್ಷಿತವಾಗಿ ಅದೇ ಜಾತಿಯ ಹಲವಾರು ಹಾವುಗಳು ಆ ಜಾಗಕ್ಕೆ ಬಂದು ಸುತ್ತಾಡುತ್ತವೆ. ಆದರೆ ಯಾರಿಗೂ ಹಾನಿ ಮಾಡುವುದಿಲ್ಲ.

    ವಿಡಿಯೋಗಾಗಿ ಕ್ಲಿಕ್ ಮಾಡಿ…

    Share Information
    Advertisement
    Click to comment

    Leave a Reply

    Your email address will not be published. Required fields are marked *