LATEST NEWS
ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ದುರುಪಯೋಗ, ಯಾವುದೇ ತನಿಖೆಗೆ ಸಿದ್ದ : ಶಾಸಕ ಮೊಯ್ದಿನ್ ಬಾವ
ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ದುರುಪಯೋಗ, ಯಾವುದೇ ತನಿಖೆಗೆ ಸಿದ್ದ : ಶಾಸಕ ಮೊಯ್ದಿನ್ ಬಾವ
ಮಂಗಳೂರು ಮಾರ್ಚ್ 10: ಚುನಾವಣಾ ಪ್ರಚಾರಕ್ಕೆ ಅಯ್ಯಪ್ಪ ಸ್ವಾಮಿ ಹಾಡನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಶಾಸಕ ಮೊಯಿಗದ್ದಿನ್ ಬಾವಾ ಸ್ಪಷ್ಟನೆ ನೀಡಿದ್ದಾರೆ.
ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ದುರುಪಯೋಗ ಆರೋಪ ತನ್ನ ಮೇಲಿದ್ದು ಯಾವುದೇ ತನಿಖೆಗೆ ನಾನು ಸಿದ್ದನಿದ್ದೇನೆ ಎಂದು ಬಾವ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮೊಯಿದ್ದಿನ್ ಬಾವಾ ನಾನು ಅಯ್ಯಪ್ಪ ಸ್ವಾಮಿಯ ವಿಶೇಷ ಭಕ್ತರಲ್ಲಿ ನಾನೂ ಒಬ್ಬನಾಗಿದ್ದೆನೆ.
ಮಕರಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಹಲವು ಅಯ್ಯಪ್ಪ ಗುಡಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ಅವರು ಹೇಳಿದರು.
ನನ್ನ ಗಮನಕ್ಕೆ ಬಾರದೆ ಅಭಿಮಾನಿಗಳು ಅಥವಾ ವಿರೋಧಿಗಳು ಈ ಹಾಡು ರಚಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ ಅವರು ನಾನು ಪಾದಯಾತ್ರೆ ನಡೆಸುತ್ತಿದ್ದಾಗ ಈ ವಿಷಯ ಗಮನಕ್ಕೆ ಬಂದಿದೆ.
ಈ ಹಾಡಿನಿಂದಾಗಿ ಯಾರದ್ದಾದರೂ ಮನಸ್ಸು ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಈ ಹಾಡಿನ ವಿಷಯವನ್ನು ಬಳಸಿಕೊಂಡು ಕೆಲವರು ಧಾರ್ಮಿಕ ಭಾವನೆ ಕೆಣಕುವ ಕೆಲಸ ಮಾಡುತ್ತಿದ್ದಾರೆ.
ಇದನ್ನೇ ಬಳಸಿಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾರೋ ಮಾಡಿದ ತಪ್ಪನ್ನು ನ್ನ ತಲೆಗೆ ಕಟ್ಟಿ ನಾನು ಮಾಡಿದ್ದೇನೆ ಹೇಳುವುದು ತಪ್ಪಲ್ಲ.
ಒಂದು ವೇಳೆ ನಾನು ತಪ್ಪು ಮಾಡಿದ್ದರೆ ದೇವರು ಕೂಡಾ ಕ್ಷಮಿಸಲ್ಲ ಎಂದು ಹೇಳಿದ ಅವರು ನಾನು ಆಣೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.