Connect with us

    National

    ಬ್ಯಾನ್ ಆದ 59ರಲ್ಲಿ Zoom App ಯಾಕಿಲ್ಲ? ಝೂಮ್, ಪಬ್ ಜಿ ಬಳಕೆ ಮಾಡಬಹುದೇ??..ಇಲ್ಲಿದೆ ಉತ್ತರ !

    ನವದೆಹಲಿ, ಜೂನ್ 30: ಭಾರತ ಸರಕಾರ ಚೀನಾ ಮೂಲದ ಟಿಕ್ ಟಾಕ್, ಷೇರ್ ಇಟ್ ಸೇರಿದಂತೆ 59 ಆ್ಯಪ್ ಗಳನ್ನು ನಿಷೇಧಿಸಿದೆ. ಆದರೆ, ಭಾರತೀಯರು ಅತಿ ಹೆಚ್ಚು ಬಳಕೆ ಮಾಡುವ ಝೂಮ್ ಆ್ಯಪ್ ಮತ್ತು ಪಬ್ ಜಿಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.

    ಭಾರತ – ಚೀನಾ ಮಧ್ಯೆ ಘರ್ಷಣೆ ಸಂಭವಿಸಿದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಗಳನ್ನು ನಿಷೇಧ ಮಾಡುವಂತೆ ಅಭಿಯಾನ ನಡೆದಿತ್ತು. ಕೆಲವರು ಚೀನಾ ಆ್ಯಪ್ ಗಳನ್ನು ಸ್ವಯಂಪ್ರೇರಿತವಾಗಿ ಅನ್ ಇನ್ ಸ್ಟಾಲ್ ಮಾಡಿಕೊಂಡಿದ್ದರು. ಇಂಥ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ ಈಗ 59 ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಿ ಆದೇಶ ಮಾಡಿದೆ. ಯುವತಿಯರು ಹೆಚ್ಚಾಗಿ ಬಳಸುವ ಟಿಕ್ ಟಾಕ್ ಅದರಲ್ಲಿ ಪ್ರಮುಖವಾದ್ದು. ಆದರೆ, ಈ ನಿಷೇಧಿತ ಪಟ್ಟಿಯಲ್ಲಿ ಝೂಮ್ ಆ್ಯಪ್ ಇಲ್ಲ. ಮಕ್ಕಳು ಹೆಚ್ಚು ಯೂಸ್ ಮಾಡುವ ಪಬ್ ಜಿ ಆ್ಯಪ್ ಕೂಡ ನಿಷೇಧ ಆಗಿಲ್ಲ. ಭಾರತದಲ್ಲಿ ಲಾಕ್ ಡೌನ್ ಬಳಿಕ ಕಂಪೆನಿಗಳು ಝೂಮ್ ಆ್ಯಪ್ ಮೂಲಕ ಸಂವಹನ ಆರಂಭಿಸಿದ್ದವು. ಹೋಮ್ ಕಂ ವರ್ಕ್ ಆಧರಿತ ಉದ್ಯೋಗಸ್ಥರು ಝೂಮ್ ಆ್ಯಪ್ ಬಳಕೆ ಹೆಚ್ಚಿಸಿದ್ದರು. ಇದೇ ವೇಳೆ, ಝೂಮ್ ಆ್ಯಪ್ ಬಳಕೆ ಮಾಡದಂತೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಭದ್ರತೆ ವಿಚಾರದಲ್ಲಿ ಸೂಕ್ತವಾಗಿಲ್ಲ ಎಂದು ಗುಪ್ತಚರ ಏಜನ್ಸಿಯೂ ಝೂಮ್ ಆ್ಯಪ್ ನಿಷೇಧಕ್ಕೆ ಶಿಫಾರಸು ಮಾಡಿತ್ತು. ಸರಕಾರದ ಮಟ್ಟದಲ್ಲಿ ಸಂವಹನಕ್ಕೆ ಇದನ್ನು ಬಳಸದಂತೆ ಸೂಚಿಸಲಾಗಿತ್ತು. ಆದರೆ, ಈಗ ನಿಷೇಧಗೊಂಡ ಪಟ್ಟಿಯಲ್ಲಿ ಝೂಮ್ ಆ್ಯಪ್ ಇಲ್ಲದಿರುವುದು ಜನರಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿದೆ. ಅದನ್ನು ಬಳಕೆ ಮಾಡಬಹುದೇ ಅನ್ನುವ ಸಂಶಯ ಎದುರಾಗಿದೆ. ಈ ಬಗ್ಗೆ ಅಧಿಕೃತವಾಗಿ ಸರಕಾರವಾಗಲೀ, ಯಾವುದೇ ಸಂಸ್ಥೆಗಳಾಗಲೀ ಹೇಳಿಕೊಂಡಿಲ್ಲ.

    ಆದರೆ, ಹಿಂದುಸ್ಥಾನ್ ಟೈಮ್ಸ್ ಈ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಝೂಮ್ ಚೀನಾ ಮೂಲದ ಕಂಪೆನಿಯದ್ದು ಎನ್ನಲಾಗ್ತಿತ್ತು. ಆದರೆ, Zoom App ಚೀನಾ ಮೂಲದ್ದಲ್ಲ. ಝೂಮ್ ಆ್ಯಪ್ ಸ್ಟಾರ್ಟ್ ಮಾಡಿದ್ದು ಒಬ್ಬ ಚೈನೀಸ್. ಎರಿಕ್ ಯುವಾನ್ ಎನ್ನುವಾತ. ಆದರೆ, ಆತ ಚೀನಾ ಮೂಲದ ಅಮೆರಿಕನ್ ಪ್ರಜೆ. ಹೀಗಾಗಿ ಝೂಮ್ ಆ್ಯಪ್ ಅಮೆರಿಕ ಮೂಲದ ಕಂಪನಿಯದ್ದಾಗಿದೆ. ಸದ್ಯಕ್ಕೆ ಚೀನಾ ಮೂಲದ ಆ್ಯಪ್ ಗಳು ಮಾತ್ರ ನಿಷೇಧವಾಗಿದ್ದರಿಂದ ಝೂಮ್ ಆ್ಯಪ್ ಬ್ಯಾನ್ ಆಗಿಲ್ಲ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಹೇಳಿದೆ.
    ಹಾಗೆಂದು ಝೂಮ್ ಆ್ಯಪ್ ವಿಚಾರದಲ್ಲಿ ಸಂಶಯಗಳು ಮೂಡಿದ್ದು ಯಾಕೆ ಎನ್ನುವ ಬಗ್ಗೆಯೂ ಸ್ಪಷ್ಟನೆ ನೀಡಿದೆ. ಚೀನಾದ ಟಿಯಾನ್ಮೆನ್ ಸ್ಕ್ವೇರ್ ಸ್ಮರಣೆ ಕಾರ್ಯಕ್ರಮ ವಿಚಾರದಲ್ಲಿ ಝೂಮ್ ಬಳಕೆಯಾಗಿದ್ದು ಅದರ ಬಗ್ಗೆ ಸಂಶಯಗಳನ್ನು ಮೂಡಿಸಿದ್ದವು. ಆದರೆ, ಆ ಬಗ್ಗೆ ಆನಂತರ ಚೀನಾ ಸರಕಾರವೇ ನಮ್ಮಲ್ಲಿ ಅಂಥ ವಿಡಿಯೋ ಸಂವಾದಕ್ಕೆ ಅವಕಾಶಗಳಿಲ್ಲ, ವಿಡಿಯೋ ಡಿಲೀಟ್ ಮಾಡುವಂತೆ ಝೂಮ್ ಸಂಸ್ಥೆಗೆ ಹೇಳಿತ್ತು. ಝೂಮ್ ಅದರಂತೆ ಆ ಸಂಶಯಿತ ಕಾರ್ಯಕ್ರಮದ ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ, ನಾವು ಯಾವುದೇ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಚೀನಾ ಸರಕಾರಕ್ಕೆ ಕೊಡುವುದಿಲ್ಲ. ಸಂವಾದ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಎಂಟ್ರಿ ಕೊಡಲು ಅವಕಾಶ ಇರುವುದಿಲ್ಲ ಅಂತ ಝೂಮ್ ಕಂಪೆನಿ ಸ್ಪಷ್ಟನೆ ನೀಡಿತ್ತು. ಈ ವಿಚಾರದ ಬಳಿಕ ಝೂಮ್ ಚೀನಾ ಮೂಲದ್ದೆಂದು ವದಂತಿ ಹಬ್ಬಿದ ಹಿನ್ನೆಲೆ ಅದನ್ನು ಬಳಕೆ ಮಾಡದಂತೆ ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದವು. ಇದೆಲ್ಲ ಆಗಿದ್ದರೂ ಸದ್ಯಕ್ಕೆ ಭಾರತ ಸರಕಾರ ಝೂಮ್ ಆ್ಯಪ್ ನಿಷೇಧ ಮಾಡಿಲ್ಲ.

    ಪಬ್ ಜಿ ನಿಷೇಧ ಯಾಕಿಲ್ಲ ?

    ಲಾಕ್ ಡೌನ್ ಬಳಿಕ ಮಕ್ಕಳು ಪಬ್ ಜಿಯಲ್ಲೇ ಇಡೀ ದಿನ ಕಾಲ ಕಳೆಯುತ್ತಾರೆ‌. ಅದನ್ನೊಂದು ನಿಷೇಧ ಮಾಡಬೇಕೆಂಬ ಒತ್ತಾಯ ಪಾಲಕರಿಂದ ಕೇಳಿಬಂದಿತ್ತು. ಈಗ ಅದೂ ಚೀನಾ ಮೂಲದ್ದಲ್ಲ ಎನ್ನುವ ಮಾಹಿತಿ ಇದೆ. ಪಬ್ ಜಿ ಮೂಲತಃ ದಕ್ಷಿಣ ಕೊರಿಯಾ ದೇಶದ್ದು. ಆದರೆ, ಚೀನಾ ಮೂಲದ ಮಾರ್ಕೆಟಿಂಗ್ ಕಂಪೆನಿ ಟೆನ್ಸೆಂಟ್ ಸ್ಟ್ರಕ್, ಪಬ್ ಜಿಯನ್ನು ಚೀನಾದಲ್ಲಿ ಮಾರ್ಕೆಟ್ ಮಾಡಿ ಅತಿ ಹೆಚ್ಚು ಬಳಕೆಯಾಗುವಂತೆ ಮಾಡಿತ್ತು. ಭಾರತದಲ್ಲಿ ಪ್ಲೇ ಸ್ಟೋರ್ ಮೂಲಕ ಟೆನ್ಸೆಂಟ್ ಕಂಪನಿಯೇ ಪಬ್ ಜೀಯ ಹಂಚಿಕೆ ಹಕ್ಕು ಹೊಂದಿದೆ. ಆದರೆ, ಇವುಗಳ ಮಿಕ್ಸೆಡ್ ಓನರ್ ಶಿಪ್ ಭಾರತದಲ್ಲಿ ಪಬ್ ಜಿ ಬ್ಯಾನ್ ಆಗುವ ತೂಗುಕತ್ತಿಯಿಂದ ತಪ್ಪಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ಇನ್ನು ವಾಟ್ಸ್ ಆ್ಯಪ್ ಕೂಡ ಬ್ಯಾನ್ ಆಗುತ್ತದೆಯೇ ಅನ್ನುವ ಅನುಮಾನ ಹಲವರಲ್ಲಿತ್ತು. ಆದರೆ, ವಾಟ್ಸ್ ಆ್ಯಪ್ ಕೂಡ ಚೀನಾ ಮೂಲದ್ದಲ್ಲ. ವಾಟ್ಸ್ ಆ್ಯಪ್ ಪೂರ್ತಿಯಾಗಿ ಫೇಸ್ ಬುಕ್ ಕಂಪನಿಯ ತೆಕ್ಕೆಯಲ್ಲಿದ್ದು ಚೀನಾದವರು ಯಾವುದೇ ಕಾರಣಕ್ಕೂ ಅದನ್ನು ಹ್ಯಾಕ್ ಮಾಡಲು ಸುಲಭ ಇಲ್ಲ‌. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಆ್ಯಪ್ ಆಗಿ ವಾಟ್ಸ್ ಆ್ಯಪ್ ಗುರುತಿಸಿಕೊಂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *