LATEST NEWS
ಬೈಕ್ ವೀಲಿಂಗ್ – ಯೂಟ್ಯೂಬರ್ ಗೆ 10 ವರ್ಷ ಬೈಕ್ ಮುಟ್ಟದ ಹಾಗೆ ಮಾಡಿದ ಸಾರಿಗೆ ಇಲಾಖೆ…!!
ಚೆನ್ನೈ ಅಕ್ಟೋಬರ್ 7 : ಜನಪ್ರಿಯ ತಮಿಳು ಯೂಟ್ಯೂಬರ್ ಟಿಟಿಎಫ್ ವಾಸನ್ ಅವರ ಚಾಲನಾ ಪರವಾನಗಿಯನ್ನು ಮುಂದಿನ ಹತ್ತು ವರ್ಷಗಳವರೆಗೆ ಅಮಾನತುಗೊಳಿಸಲಾಗಿದೆ.
ಖ್ಯಾತ ಯೂಟ್ಯೂಬರ್ ಆಗಿರುವ ವಾಸನ್ ಸುಮಾರು 45 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ ನ್ನು ಹೊಂದಿದ್ದಾರೆ. ಇತ್ತೀಚೆಗೆ ಕಾಂಚಿಪುರಂ ಬಳಿಯ ಥಮಲ್ ಪ್ರದೇಶದ ಚೆನ್ನೈ-ವೆಲ್ಲೂರು ಹೆದ್ದಾರಿಯಲ್ಲಿ ವೇಗವಾಗಿ, ಅಜಾಗರೂಕತೆಯಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನವನ್ನು ವೀಲಿಂಗ್ ಮಾಡಿದ್ದರು. ಅಲ್ಲದೆ ವೀಲಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡಿದ್ದರು. ಈ ಘಟನೆ ಕುರಿತಂತೆ ಬಾಲುಚೆಟ್ಟಿ ಛತ್ರಂ ಪೊಲೀಸರು ಪ್ರಕರಣ ದಾಖಲಿಸಿ ಟಿಟಿಎಫ್ ವಾಸನ್ ಅವರನ್ನು ಸೆಪ್ಟೆಂಬರ್ 19 ರಂದು ಬಂಧಿಸಿದ್ದರು. ಇನ್ನು ಸ್ಥಳೀಯ ನ್ಯಾಯಾಲಯ ಜಾಮೀನು ನೀಡದ ಹಿನ್ನಲೆ ಟಿಟಿಎಫ್ ವಾಸನ್ ಪರವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಲ್ಲೂ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು,
ಇದೀಗ ಟಿಟಿಎಫ್ ವಾಸನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಇನ್ನು ಹತ್ತು ವರ್ಷಗಳ ಕಾಲ ಅವರ ಚಾಲನಾ ಪರವಾನಗಿಯನ್ನು ಸಾರಿಗೆ ಇಲಾಖೆ ರದ್ದುಗೊಳಿಸಿದೆ. ವಾಸನ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ಯೂಟ್ಯೂಬ್‌ನಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದಾರೆ, ಅಲ್ಲಿ ಅವರು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸ್ಟಂಟ್‌ಗಳು, ರೇಸಿಂಗ್, ವೀಲಿಗಳು ಇತ್ಯಾದಿಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ