Connect with us

    LATEST NEWS

    ಯೂಟ್ಯೂಬ್ ವಿಡಿಯೋ ಮಾಡಲು 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸಿ ಸಾವನಪ್ಪಿದ ಯುವಕ

    ಉತ್ತರ ಪ್ರದೇಶ ಮೇ 04: ಖ್ಯಾತ ಯೂಟ್ಯೂರ್ ಒಬ್ಬ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸಿ ಉಂಟಾದ ಅಪಘಾತದಲ್ಲಿ ಸಾವನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ಬುಧವಾರ ನಡೆದಿದೆ.


    ಯೂಟ್ಯೂಬ್‌ ನಲ್ಲಿ ತನ್ನ ʼಪ್ರೊ ರೈಡರ್ 1000ʼ ಎನ್ನುವ ಚಾನೆಲ್‌ ನಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಡೆಹ್ರಾಡೋನ್ ಮೂಲದ ಅಗಸ್ತ್ಯ ಚೌಹಾಣ್ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.


    ಅಗಸ್ತ್ಯ ಚೌಹಾಣ್ ದೆಹಲಿಯಲ್ಲಿ ನಡೆಯಲಿದ್ದ ಬೈಕ್‌ ರೇಸಿಂಗ್‌ ವೊಂದರಲ್ಲಿ ಭಾಗವಹಿಸಲು ʼZX10R ನಿಂಜಾʼ ಸೂಪರ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ತನ್ನ ಯೂಟ್ಯೂಬ್‌ ಚಾನೆಲ್‌ ಗಾಗಿ ಮೊದಲ ಬಾರಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್‌ ಓಡಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ತಪ್ಪಲ್ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇ ದಾರಿ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅವರ ಹೆಲ್ಮೆಟ್‌ ಪುಡಿ ಪುಡಿಯಾಗಿದ್ದು, ತಲೆಗೆ ತೀವ್ರತರದ ಏಟಾಗಿ ಅಗಸ್ತ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply