LATEST NEWS
ಯುಟ್ಯೂಬ್ ನೋಡಿ ಹೆಂಡತಿಯ ಹೆರಿಗೆ ಮಾಡಿದ ಪತಿ…ತೀವ್ರ ರಕ್ತಸ್ರಾವದಿಂದ ಪತ್ನಿ ಸಾವು…!!
ತಮಿಳನಾಡು ಅಗಸ್ಟ್ 24: ಯುಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಹೋಗಿ ಗರ್ಭಿಣಿ ಮಹಿಳೆ ಸಾವನಪ್ಪಿದ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಲೋಗನಾಯಕಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಯೂಟ್ಯೂಬ್ ನೋಡಿ ಪತ್ನಿಯ ಹೆರಿಗೆ ಮಾಡಲು ಹೋಗಿದ್ದಾರೆ. ಈ ವೇಳೆ ಪತಿ ಹೊಕ್ಕುಳಬಳ್ಳಿಯನ್ನು ಸರಿಯಾಗಿ ಕತ್ತರಿಸದ ಕಾರಣ ಮಹಿಳೆಗೆ ರಕ್ತ ಸ್ರಾವವಾಗಿ ಸಾವನಪ್ಪಿದ್ದಾಳೆ. ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ವೈದ್ಯಾಧಿಕಾರಿ ರಥಿಕಾ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,
ಪೊಲೀಸ್ ಮೂಲಗಳ ಪ್ರಕಾರ, ಲೋಗನಾಯಕಿ ಅವರ ಪತಿ ಮಾದೇಶ್ ಅವರು ಪತ್ನಿಗೆ ಹೆರಿಗೆ ನೋವು ಬಂದ ಹಿನ್ನಲೆ ಮನೆಯಲ್ಲಿ ಹೆರಿಗೆಗೆ ಮುಂದಾದರು. ಹೆರಿಗೆಯ ಸಮಯದಲ್ಲಿ ಹೊಕ್ಕುಳಬಳ್ಳಿಯನ್ನು ಸರಿಯಾಗಿ ಕತ್ತರಿಸದ ಕಾರಣ ತೀವ್ರ ರಕ್ತ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಪಿಎಚ್‌ಸಿಗೆ ಕರೆತರಲಾಯಿತು ಮತ್ತು ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.
ನಂತರ ಪೊಲೀಸರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.