LATEST NEWS
ಕೊಣಾಜೆಯಲ್ಲಿ ಯುವಕರ ದಾಂಧಲೆ : ಮಸೀದಿ ಅಂಗಡಿಗಳ ಸೊತ್ತುಗಳಿಗೆ ಹಾನಿ

ಕೊಣಾಜೆಯಲ್ಲಿ ಯುವಕರ ದಾಂಧಲೆ : ಮಸೀದಿ ಅಂಗಡಿಗಳ ಸೊತ್ತುಗಳಿಗೆ ಹಾನಿ
ಮಂಗಳೂರು,ಜನವರಿ 08 : ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಂದ ದಾಂಧಲೆ ನಡೆಸಿ ಸಾರ್ವಜನಿಕರ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೇಕಲ್ ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಈ ಸಂಬಂಧ ಸುಳ್ಯ ಮೂಲದ ಜಯರಾಜ್ ಮತ್ತು ನಿತಿನ್ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.

ಸ್ಥಳೀಯ ನೀರಿನ ಟ್ಯಾಂಕರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಈ ಆರೋಪಿಗಳು ಕಂಠ ಪೂರ್ತಿ ಕುಡಿದು ಸ್ಥಿಮಿತ ಕಳೆದುಕೊಂಡಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಅಂಗಡಿಯೊಂದರ ಫ್ರಿಡ್ಜ್, ಮಸೀದಿಯ ಬಲ್ಬ್, ಟ್ಯೂಬ್ ಲೈಟ್, ಗ್ರಾನೈಟ್ ಇತರ ಸೊತ್ತುಗಳನ್ನು ಒಡೆದು ಹಾಕಿದ್ದಾರೆ.
ಯುವಕರ ಏಕಾ ಏಕಿ ಧಾಂದಲೆಯಿಂದ ನಾಟೆಕಲ್ ಪ್ರದೇಶದಲ್ಲಿ ಸ್ವಲ್ಪ ಹೊತ್ತುಗಳ ಜಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಇದೇ ಸಂದರ್ಭದಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿದ್ದ ಸಿಸಿ ಕ್ಯಾಮೆರಾವನ್ನೂ ಒಡೆದುಹಾಕಲು ಯತ್ನಿಸಿದ್ದಾರೆ.
ಆದರೆ ಆರೋಪಿಗಳ ಬೈಕ್ ನಂಬರ್ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅದೇ ಸಿಸಿಕ್ಯಾಮೆರಾ ಫೂಟೇಜ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಕಂಬಿ ಎಣಿಸುವ ಕಾರ್ಯಕ್ಕೆ ಪೋಲಿಸರು ಕಳಿಸಿದ್ದಾರೆ.