LATEST NEWS
ಹಸೆಮಣೆ ಏರಬೇಕಾದ ಯುವಕ ಆತ್ಮಹತ್ಯೆಗೆ ಶರಣು….!!

ಮಂಗಳೂರು ನವೆಂಬರ್ 23: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು 28 ವರ್ಷ ಪ್ರಾಯದ ವಿಘ್ನೇಶ್ ಎಂದು ಗುರುತಿಸಲಾಗಿದೆ.
ವಿಘ್ನೇಶ ತಾನು ಕೆಲಸ ಮಾಡುವ ಮಳಿಗೆಯ ಸನಿಹದಲ್ಲೇ ಇದ್ದ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳು ಗೊತ್ತಾಗಿಲ್ಲ. ನಗರದ ಆಯುರ್ವೇದ ಔಷಧಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಘ್ಶ್ನೇಶ್ ಅವರಿಗೆ ಮುಂದಿನ ಫೆಬ್ರವರಿಯಲ್ಲಿ ವಿವಾಹ ನಿಶ್ಚಯವಾಗಿದ್ದು, ಈಗಾಗಲೇ ನಿಶ್ಚಿತಾರ್ಥ ಕೂಡ ನಡೆದಿದೆ. ಕೆಲಸ ಮಾಡುತ್ತಿದ್ದ ವಿಘ್ನೆಶ್ ಸಮಾಜ ಸೇವೆಯಲ್ಲೂ ಸದಾ ಮುಂದಿದ್ದರು.
