DAKSHINA KANNADA
ಯುವಕನ ಫೋಟೋ ಬಳಸಿ ಆಕ್ಷೇಪಾರ್ಹ ಪೋಸ್ಟ್ – ಪೊಲೀಸರಿಗೆ ದೂರು ನೀಡಿದ ನೊಂದ ಯುವಕ

ಪುತ್ತೂರು ಮೇ 03: ಬಜ್ಪೆಯಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಫೋಟೋ ಬಳಸಿ ಆಕ್ಷೇಪಾರ್ಹ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇದೀಗ ನೊಂದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಸುಹಾಸ್ ಹತ್ಯೆ ಆರೋಪಿಗಳಿಗೆ ಕಾರು ನೀಡಿದ ಹಿಂದೂ ಯುವಕ ಎಂಬ ತಲೆಬರಹದಲ್ಲಿ ಯುವಕನೊಬ್ಬನ ಪೋಟೋ ವೈರಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಬ್ರಹ್ಮಣ್ಯ ನಿವಾಸಿ ತಶ್ವಿತ್ ಎನ್ನುವ ಯುವಕನ ಫೋಟೋವನ್ನು ಕಿಡಿಗೇಡಿಗಳು ಬಳಸಿಕೊಂಡು ಅದನ್ನು ಎಡಿಟ್ ಮಾಡಿ ಇದೀಗ ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಂ ಪೇಜ್ ಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದಾಗಿ ನೊಂದ ಯುವಕ ತಶ್ವಿತ್ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳಲು ದೂರು ದಾಖಲಿಸಿದ್ದಾನೆ.
