LATEST NEWS
ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಯುವಕನೋರ್ವ ನೀರುಪಾಲು

ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಯುವಕನೋರ್ವ ನೀರುಪಾಲು
ಮಂಗಳೂರು ಮಾರ್ಚ್ 25: ಮೀನು ಹಿಡಿಯಲು ಗೆಳೆಯರೊಂದಿಗೆ ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಡೆಯಾದ ಘಟನೆ ನಡೆದಿದೆ.
ಮಂಗಳೂರು ಹೊರಭಾಗದ ತೊಕ್ಕೊಟ್ಟು ಬಳಿಯಿರುವ ನೇತ್ರಾವತಿ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೂಡಬಿದಿರೆಯ ನಿವಾಸಿ ಜೋಯೆಲ್ ಡಿಸೋಜಾ (23) ಮುಳುಗಡೆಯಾದ ಯುವಕ ಎಂದು ಗುರುತಿಸಲಾಗಿದೆ.

ಮಂಗಳೂರು ಹೊರಭಾಗದ ತೊಕ್ಕೊಟ್ಟು ಬಳಿ ನೇತ್ರಾವತಿ ನದಿಗೆ ನಾಲ್ಕು ಮಂದಿ ಗಳೆಯರ ತಂಡ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುತ್ತಿರುವ ಸಂದರ್ಭದಲ್ಲಿ ಜೋಯಲ್ ಡಿಸೋಜಾ ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದ ಜೋಯಲ್ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.
ಘಟನೆಯ ಬಗ್ಗೆ ಸ್ನೇಹಿತರು ಸ್ಥಳೀಯರಿಗೆ ಕೂಡಲೇ ಸೂಚನೆ ನೀಡಿದ್ದಾರೆ, ಸ್ಥಳೀಯರು ನೀರಿಗಿಳಿದು ಸಾಕಷ್ಟು ಹುಡುಕಾಡಿದರೂ ಜೋಯೆಲ್ ದೇಹ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದೆ.