LATEST NEWS
ಕುಮಾರಧಾರ ನದಿಯಲ್ಲಿ ಈಜಲು ತೆರಳಿದ ಯುವಕ ನೀರುಪಾಲು

ಕುಮಾರಧಾರ ನದಿಯಲ್ಲಿ ಈಜಲು ತೆರಳಿದ ಯುವಕ ನೀರುಪಾಲು
ಸುಳ್ಯ ಡಿಸೆಂಬರ್ 13: ಕುಮಾರಧಾರಾ ನದಿಯಲ್ಲಿ ಈಜಲು ಹೋದ ಯುವಕನೋರ್ವ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ನದಿಯಲ್ಲಿ ಕೊಚ್ಚಿ ಹೋದ ಯುವಕನನ್ನು ಕೊಂಬಾರು ನಿವಾಸಿ ಜಯಪ್ರಕಾಶ್ ಎಂದು ಗುರುತಿಸಲಾಗಿದೆ.
ಜಯಪ್ರಕಾಶ್ ಪಾರ್ಟಿ ಮಾಡುವ ಕಾರಣಕ್ಕಾಗಿ ಸ್ನೇಹಿತರೊಂದಿಗೆ ಬಿಸಿಲೆಘಾಟ್ ಗೆ ಬಂದಿದ್ದಾರೆ, ಬಿಸಿಲೆಘಾಟ್ ಸಮೀಪದ ಮುಂಗುಳಿಪಾದೆ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಯುವಕನಿಗಾಗಿ ಹುಡುಕಾಟ ನಡೆಸಿದ್ದು, ಯಾವುದೇ ಕುರುಹು ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದಿಂದ ಯುವಕನಿಗಾಗಿ ಹುಡುಕಾಟದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.