LATEST NEWS
Kasaragod : ತೆಂಗಿನ ಗರಿ ಕೀಳಲು ಹೋದ ಯುವಕ ಕರೆಂಟ್ ಶಾಕಿಗೆ ಬಲಿ..!
ಕಾಸರಗೋಡು: ಕರೆಂಟ್ ಶಾಕಿಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಕಾಸರಗೋಡಿನ (kasaragod) ಮಂಜೇಶ್ವರದ ಹೊಸ ಬೆಟ್ಟು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಯಶವಂತ(21) ಕರೆಂಟ್ ಶಾಕಿಗೆ ಬಲಿಯಾದ ಯುವಕನಾಗಿದ್ದಾನೆ. ಸಂಜೆ ಮನೆಯ ಟೆರೇಸ್ ನಲ್ಲಿ ಬಿದ್ದಿದ್ದ ತೆಂಗಿನ ಗರಿಯನ್ನು ತೆಗೆಯಲು ಯಶವಂತ ಹೋಗಿದ್ದರು. ಈ ವೇಳೆ ತೆಂಗಿನ ಗರಿ ಅಲ್ಲೇ ಹತ್ತಿರದಲ್ಲಿ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿಗೆ ತಗುಲಿ ಯಶವಂತರಿಗೆ ಕರೆಂಟ್ ಶಾಕ್ ಹೊಡೆದಿದೆ. ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಯಶವಂತ ಅಲ್ಲೇ ಕುಸಿದು ಮೃತಪಟ್ಟಿದ್ದಾರೆನ್ನಲಾಗಿದೆ. ತುಂಬಾ ಹೊತ್ತು ಕಳೆದರೂ ಯಶವಂತ ಕೆಳಗೆ ಬಾರದ ಕಾರಣ ಅವರ ಸಹೋದರಿ ಟೆರೇಸ್ ಗೆ ಮೇಲೇರಿ ನೋಡಿದಾಗ ಈ ದುರಂತ ಬೆಳಕಿಗೆ ಬಂದಿದೆ.
You must be logged in to post a comment Login