Connect with us

    LATEST NEWS

    ಬದಿಯಡ್ಕ – ಯುವಕನ ಬೆದರಿಕೆಗೆ ವಿಷ ಸೇವಿಸಿದ್ದ 10 ನೇ ತರಗತಿ ವಿಧ್ಯಾರ್ಥಿನಿ ಸಾವು

    ಬದಿಯಡ್ಕ ಜನವರಿ 31: ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಬೆದರಿಕೆಗೆ ವಿಷ ಸೇವಿಸಿದ್ದ 10ನೇ ತರಗತಿ ವಿಧ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.


    ಕುಂಬ್ಡಾಜೆಯ ನಿವಾಸಿಯಾದ ಹದಿನಾರರ ವಿಧ್ಯಾರ್ಥಿನಿಗೆ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದ ಅನ್ವರ್, ಆಕೆಗೆ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಈ ಬಗ್ಗೆ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು ಆದರೆ ಆತನ ಕಿರಿಕಿರಿ ತಡೆಯಲಾಗದ ಹಿನ್ನಲೆ ವಾರದ ಹಿಂದೆ ಆಕೆ ವಿಷ ಸೇವಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಮೊಗ್ರಾಲ್ ಪುತ್ತೂರು ಕೋಟೆಕುನ್ನುವಿನ ಅನ್ವರ್ (24) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅನ್ವರ್ ನ್ಯಾಯಾಂಗ ಬಂಧನದಲ್ಲಿದ್ದು, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಬಗ್ಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply